ಪಣಜಿ: ಕೇಂದ್ರ ಆಯುಷ್ ಸಚಿವಾಲಯದ ರಾಜ್ಯ ಖಾತೆ ಸಚಿವ ಶ್ರೀಪಾದ್ ನಾಯ್ಕ್ ಅವರು, ಬುಧವಾರ ಗೋವಾದ ದರ್ಗಲ್ನಲ್ಲಿ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಸ್ಥಾಪನೆಗೆ ಅಡಿಗಲ್ಲು ಹಾಕಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಈ ಇನ್ಸ್ಟಿಟ್ಯೂಟ್ ಸ್ಥಾಪನೆಯಿಂದಾಗಿ ಈ ಭಾಗ ಮೆಡಿಕಲ್ ಹಬ್ ಆಗಿ ಪರಿವರ್ತನೆಯಾಗಲಿದೆ ಮತ್ತು ವಿಶ್ವದಾದ್ಯಂತದ ಪ್ರವಾಸಿಗರನ್ನು ಸೆಳೆಯಲಿದೆ. ಯೋಗ ಮತ್ತು ನ್ಯಾಚುರೋಪಥಿಯಲ್ಲಿ ಹಲವಾರು ಬಗೆಯ ಸಣ್ಣ ಅವಧಿಯ ಕೋರ್ಸುಗಳನ್ನು ಇಲ್ಲಿ ನೀಡಲಾಗುವುದರಿಂದ ಗೋವಾ ಪ್ರವಾಸೋದ್ಯಮವೂ ಬೆಳಯಲಿದೆ ಎಂದಿದ್ದಾರೆ.
ಪಶ್ಚಿಮಘಟ್ಟ ಮತ್ತು ಸಮುದ್ರಗಳ ಜೀವವೈವಿಧ್ಯತೆಗೆ ಹತ್ತಿರವಾಗಿರುವ ಕಾರಣದಿಂದಾಗಿ ಈ ಸಂಸ್ಥೆ ಸಂಶೋಧನೆಗೆ ಗಣನೀಯ ಕೊಡುಗೆಗಳನ್ನು ನೀಡಲಿದೆ. ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗವಕಾಶಗಳನ್ನು ಇದು ಕಲ್ಪಿಸಿಕೊಡಲಿದೆ ಎಂದಿದ್ದಾರೆ.
ಈ ಸಂಸ್ಥೆ 100 ಬೆಡ್ಗಳುಳ್ಳ ಆಸ್ಪತ್ರೆಯನ್ನು ಒಳಗೊಳ್ಳಲಿದ್ದು, ಹೊರರೋಗಿ ವಿಭಾಗ ಮತ್ತು ಸಂಶೋಧನಾ ಕೇಂದ್ರವನ್ನು ಹೊಂದಲಿದೆ, ಸ್ನಾತಕೋತ್ತರ ಮತ್ತು ಪಿಎಚ್ಡಿ ಪದವಿಗಳನ್ನು ನೀಡಲಿದೆ.
source: newsbharati
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.