ನವದೆಹಲಿ: ಜನರನ್ನು ಇನ್ನಿಲ್ಲದಂತೆ ಕಾಡುವ ಚಿಕನ್ಗುನ್ಯಾ ಕಾಯಿಲೆಗೆ IIT Roorkee ಸಂಶೋಧಕರು ಹುಣಸೆ ಬೀಜದಿಂದ ಅದ್ಭುತವಾದ ಔಷಧಿಯೊಂದನ್ನು ಕಂಡುಹಿಡಿದಿದ್ದಾರೆ.
ಹುಣಸೆ ಬೀಜದಲ್ಲಿ ಇರುವ ಪ್ರೋಟಿನ್ನಲ್ಲಿ ಚಿಕನ್ಗುನ್ಯಾ ಹರಡುವ ವೈರಾಣು CHIKV alphavirusನ್ನು ನಿಯಂತ್ರಿಸುವ ರೂಗ ನಿರೋಧಕ ಗುಣವಿದೆ ಎಂದು ಸಂಶೋಧಕರು ಹೇಳಿದ್ದಾರೆ. ಅವರ ಅಧ್ಯಯನವನ್ನು ವೈಜ್ಞಾನಿಕ ನಿಯತಕಾಲಿಕೆ ’ವೈರೋಲಜಿ’ ಸ್ವೀಕಾರ ಮಾಡಿದೆ.
ಹುಣಸೆ ಬೀಜದಲ್ಲಿರುವ ಪ್ರೋಟಿನ್ನಲ್ಲಿನ ಲೆಕ್ವಿನ್ ಎಂಬ ನೈಸರ್ಗಿಕ ರಾಸಾಯನಿಕ ಇದ್ದು, ಈ ರಾಸಾಯನಿಕವನ್ನು ಬಳಸಿ ಚಿಕನ್ಗುನ್ಯಾ ವಿರುದ್ಧ ಹೋರಾಡುವ ಔಷಧಿಯನ್ನು ಇವರು ಸಿದ್ಧಪಡಿಸಿದ್ದಾರೆ. ಇದರ ಪೇಟೆಂಟ್ಗಾಗಿ ಅರ್ಜಿ ಹಾಕಿದ್ದಾರೆ.
ಚಿಕನ್ಗುನ್ಯಾದಿಂದ ಜ್ವರ, ತಲೆನೋವು, ಗಂಟು ನೋವು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. 2015ರಲ್ಲಿ ಭಾರತ, ಆಫ್ರಿಕಾ, ಅಮೆರಿಕಾ ಸೇರಿದಂತೆ ಅನೇಕ ಕಡೆಗಳಲ್ಲಿ ಈ ರೋಗ ಕಾಣಿಸಿಕೊಂಡಿತ್ತು.
source: hindutan times
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.