ನವದೆಹಲಿ: ಅತ್ಯದ್ಭುತವಾದ ಡೂಡಲ್ ವಿನ್ಯಾಸದ ಮೂಲಕ ಗೂಗಲ್ ಮಕ್ಕಳ ದಿನಾಚರಣೆಯನ್ನು ಸಂಭ್ರಮಿಸಿದೆ. ‘2014 ಡೂಡಲ್ 4 ಗೂಗಲ್ ಕಾಂಪಿಟೀಷನ್ ‘ನಲ್ಲಿ ವಿಜೇತರಾದ ಮುಂಬಯಿ ವಿದ್ಯಾರ್ಥಿನಿ ವಿನ್ಯಾಸಪಡಿಸಿದ ಡೂಡಲ್ ಇದಾಗಿದೆ.
‘ನನಗೇನು ಸ್ಫೂರ್ತಿ ನೀಡುತ್ತದೆ’ ಎಂಬ ಥೀಮ್ನಲ್ಲಿ ಈ ವರ್ಷ ಸ್ಪರ್ಧೆ ಆಯೋಜನೆಗೊಳಿಸಲಾಗಿತ್ತು. ಪಿಂಗ್ಲಾ ರಾಹುಲ್ ಎಂಬ ವಿದ್ಯಾರ್ಥಿನಿ, ಬಾಹ್ಯಾಕಾಶ ವಿಶ್ಲೇಷನೆ ಬಗ್ಗೆ ತನಗಿರುವ ಮೋಹವನ್ನು ಡೂಡಲ್ ಮೂಲಕ ವ್ಯಕ್ತಪಡಿಸಿದ್ದಳು. ಇದಕ್ಕಾಗಿ ಆಕೆಗೆ ಮೊದಲ ಪ್ರಶಸ್ತಿಯೂ ಲಭಿಸಿತು. ಇದೇ ಡೂಡಲ್ನ್ನು ಇಂದು ಮಕ್ಕಳ ದಿನಾಚರಣೆಯ ವಿಶೇಷವಾಗಿ ಡೂಡಲ್ ಬಳಸಿಕೊಂಡಿದೆ.
ಗ್ಯಾಲಕ್ಸಿ, ಪ್ಲಾನೆಟ್, ಸ್ಪೇಸ್ಕ್ರಾಫ್ಟ್ ಮುಂತಾದ ಬಾಹ್ಯಾಕಾಶ ವಿಶೇಷತೆಗಳನ್ನು ಗೂಗಲ್ ಎಂಬ ಅಕ್ಷರದ ಆಕಾರದಲ್ಲಿ ಬರುವಂತೆ ಮಾಡಿ, ಕೆಳಗೆ ಬಾಲಕಿಯೊಬ್ಬಳು ಕುತೂಹಲಭರಿತವಾಗಿ ಇದನ್ನು ನೋಡುತ್ತಿರುವಂತೆ ಪಿಂಗ್ಲಾ ರಾಹುಲ್ ಡೂಡಲ್ ವಿನ್ಯಾಸಪಡಿಸಿದ್ದಾಳೆ. ಇದು ಅತ್ಯದ್ಭುತ ಎನ್ನುವ ರೀತಿಯಲ್ಲಿ ಮೂಡಿಬಂದಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.