ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ವೈಟ್ಹೌಸ್ನಲ್ಲಿ ಆಯೋಜನೆಗೊಳಿಸಲಾದ ದೀಪಾವಳಿ ಸಮಾರಂಭದಲ್ಲಿ ಭಾಗಿಯಾಗಿದ್ದು, ಭಾರತದೊಂದಿಗಿನ ಅಮೆರಿಕಾದ ಬಾಂಧವ್ಯ ಶ್ರೇಷ್ಠವಾದುದು ಎಂದು ಬಣ್ಣಿಸಿದ್ದಾರೆ.
ವೈಟ್ಹೌಸ್ನ ಐತಿಹಾಸಿಕ ರೂಸ್ವೆಲ್ಟ್ ರೂಮ್ನಲ್ಲಿ ದೀಪಗಳನ್ನು ಹೊತ್ತಿಸುವ ಮೂಲಕ ಅವರು ದೀಪಾವಳಿ ಸಮಾರಂಭಕ್ಕೆ ಚಾಲನೆಯನ್ನು ನೀಡಿದರು. ಅಪಾರ ಸಂಖ್ಯೆಯ ಅನಿವಾಸಿ ಭಾರತೀಯರು ಇದರಲ್ಲಿ ಭಾಗಿಯಾಗಿದ್ದರು.
ಇದಕ್ಕೂ ಮುನ್ನ ಮಾತನಾಡಿದ ಅವರು, ‘ಅಮೆರಿಕಾ ಭಾರತದೊಂದಿಗೆ ಗಾಢವಾದ ಸಂಬಂಧವನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ಸ್ನೇಹಕ್ಕೆ ನಾನು ಅಭಾರಿಯಾಗಿದ್ದೇನೆ’ ಎಂದರು.
‘ಇಂತಹ ಸುಂದರ ಹಬ್ಬಕ್ಕೆ ಸಾಕ್ಷಿಯಾಗಿರುವುದಕ್ಕೆ ಅತೀವ ಸಂತೋಷವಾಗುತ್ತಿದೆ. ವಿಶ್ವದಾದ್ಯಂತದ ಹಿಂದೂ, ಬುದ್ಧ, ಸಿಖ್, ಜೈನ ಧರ್ಮದ ಜನರು ಆಚರಿಸುವ ವಿಶೇಷ ಹಬ್ಬವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದೇವೆ’ ಎಂದರು.
ಜಾರ್ಜ್ ಡಬ್ಲ್ಯೂ ಬುಷ್ ಅವರ ಅಧಿಕಾರವಧಿಯಲ್ಲಿ 2003ರಿಂದ ವೈಟ್ಹೌಸ್ನಲ್ಲಿ ದೀಪಾವಳಿ ಆಚರಿಸುವ ಪದ್ಧತಿ ಆರಂಭವಾಗಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.