ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಿಂಗಾಪುರಕ್ಕೆ ಪ್ರಯಾಣಿಸಿದ್ದು, ಅಲ್ಲಿನ ಫಿನ್ಟೆಕ್ ಪೆಸ್ಟಿವಲ್ನಲ್ಲಿ ಭಾಗಿಯಾಗಿ ಪ್ರಮುಖ ಭಾಷಣ ಮಾಡಿದರು. ಈ ವೇಳೆ ಭಾರತದಲ್ಲಿ ಹೂಡಿಕೆ ಮಾಡುವಂತೆ ಅಲ್ಲಿನ ಉದ್ಯಮಿಗಳಿಗೆ ಕರೆ ನೀಡಿದರು.
‘ಎಲ್ಲಾ ಫಿನ್ಟೆಕ್ ಕಂಪನಿಗಳಿಗೆ ಮತ್ತು ಸ್ಟಾರ್ಟ್ಅಪ್ಗಳಿಗೆ ನಾನು ಹೇಳುದೇನೆಂದರೆ-ಭಾರತ ನಿಮ್ಮ ಅತ್ಯುತ್ತಮ ತಾಣವಾಗಿದೆ’ ಎಂದಿದ್ದಾರೆ.
ಎಲ್ಲ ಭಾರತೀಯರಿಗೂ ಆರ್ಥಿಕ ಒಳಗೊಳ್ಳುವಿಕೆಯನ್ನು ದೃಢಪಡಿಸಲು ತಮ್ಮ ಸರ್ಕಾರ ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ವಿವರಿಸಿದ ಅವರು, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ’ಬಲಿಷ್ಠ ಅಡಿಪಾಯ’ ಹಾಕಿದೆ ಎಂದಿದ್ದಾರೆ.
‘ಎಲ್ಲರನ್ನೂ ಒಳಪಡಿಸಿದ ಅಭಿವೃದ್ಧಿ ಧ್ಯೇಯದೊಂದಿಗೆ ನಮ್ಮ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂತು, ಈ ಧ್ಯೇಯಕ್ಕೆ ಬಲಿಷ್ಠ ಅಡಿಪಾಯದ ಅಗತ್ಯವಿತ್ತು, ಆ ಅಡಿಪಾಯ ಹಾಕಿದ್ದೇವೆ. ಭಾರತದಷ್ಟು ದೊಡ್ಡ ಗಾತ್ರದ ದೇಶಕ್ಕೆ ಸವಾಲುಗಳನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ’ ಎಂದಿದ್ದಾರೆ.
ಜಾಗತಿಕ ಆರ್ಥಿಕತೆಯ ಪರಿವರ್ತನೆಯಲ್ಲಿ ತಂತ್ರಜ್ಞಾನದ ಪಾತ್ರವನ್ನು ಕೊಂಡಾಡಿದ ಅವರು, ತಂತ್ರಜ್ಞಾನ ಸ್ಪರ್ಧಾತ್ಮಕತೆಯನ್ನು ಮತ್ತು ಹೊಸ ಜಗತ್ತಿನ ಶಕ್ತಿಯನ್ನು ಸಾರುತ್ತದೆ ಎಂದಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.