ನವದೆಹಲಿ: ವಿಶ್ವದ ಅತಿ ದೊಡ್ಡ ಮುಕ್ತ ವ್ಯಾಪಾರ ರಚನೆಯ ಒಪ್ಪಂದ, ಚತುರ್ ಆಯಾಮ ಮೈತ್ರಿ, ಇಂಡೋ-ಪೆಸಿಫಿಕ್ ಭದ್ರತೆ ಮತ್ತು ಅಮೆರಿಕಾ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರೊಂದಿಗೆ ಸಭೆ ನಡೆಸುವ ಅಜೆಂಡಾದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 14-15ರಂದು ಸಿಂಗಪುರಕ್ಕೆ ಭೇಟಿ ನೀಡಲಿದ್ದಾರೆ.
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಶೃಂಗಸಭೆ, ಈಸ್ಟ್ ಏಷ್ಯಾ ಸಮಿತ್ ಮತ್ತು ಇಂಡಿಯಾ-ಏಷಿಯನ್ ಸಮಿತ್ನಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಅಲ್ಲದೇ ಯುಎಸ್, ಜಪಾನ್, ಆಸ್ಟ್ರೇಲಿಯಾ, ಭಾರತವನ್ನೊಳಗೊಂಡ ಚತುರ್ ಆಯಾಮದ ನಾಯಕರನ್ನು ಭೇಟಿಯಾಗಿ ಇಂಡೋ-ಪೆಸಿಫಿಕ್ ಭಾಗದ ಶಾಂತಿ ಮತ್ತು ಸಮೃದ್ಧಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ನ.೧೪ರಂದು ಯುಎಸ್ ಉಪಾಧ್ಯಕ್ಷ ಪೆನ್ಸ್ ಅವರೊಂದಿಗೆ ಮೋದಿ ಸಭೆ ನಡೆಸಲಿದ್ದು, ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿ ಮತ್ತು ಇರಾನ್ನಿಂದ ತೈಲ ಖರೀದಿಗೆ ಅಮೆರಿಕಾ ವಿಧಿಸಿದ ನಿರ್ಬಂಧದ ಬಗ್ಗೆ ಚರ್ಚೆ ನಡೆಯಲಿದೆ.
source: hindustantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.