ನವದೆಹಲಿ: ಭಾರತದಲ್ಲಿ ಯೋಗ ಪ್ರಚಾರ ಮಾಡಲು ಹೊರಟಿರುವ ಸರ್ಕಾರದ ಮೇಲೆ ಹಲವಾರು ಮಂದಿ ಕೋಮುವಾದ ಆರೋಪ ಮಾಡುತ್ತಿದ್ದಾರೆ. ಕೆಲ ಮುಸ್ಲಿಂ ಸಂಘಟನೆಗಳಂತು ಯೋಗವನ್ನು ಮುಸ್ಲಿಂ ವಿರೋಧಿ ಎಂದೇ ಘೋಷಿಸಿ ಬಿಟ್ಟಿವೆ.
ಆದರೆ ನೆರೆಯ ಕಟ್ಟಾ ಮುಸ್ಲಿಂ ರಾಷ್ಟ್ರವಾದ ಪಾಕಿಸ್ಥಾನದಲ್ಲಿ ಭಾರತದ ಯೋಗ ಗುರು ರಾಮದೇವ್ ಬಾಬಾರಿಗೆ ಸೆಡ್ಡು ಹೊಡೆಯಬಲ್ಲಂತಹ ಒಬ್ಬ ಯೋಗ ಗುರುವಿದ್ದಾನೆ. ಆತನೇ ಸಂಶಾದ್ ಹೈದರ್. ಆತನೂ ಕಟ್ಟಾ ಮುಸಲ್ಮಾನ. ಆದರೂ ಯೋಗ ಮತ್ತು ಯೋಗದ ಮಹತ್ವದ ಬಗ್ಗೆ ಆತನಿಗೆ ಸ್ಪಷ್ಟ ಅರಿವಿದೆ.
ನೇಪಾಳ, ಭಾರತ, ಟೆಬೆಟ್ಗೆ ಪ್ರಯಾಣಿಸಿ ಯೋಗವನ್ನು ಕಲಿತಿರುವ ಈತ ಈಗ ಇತರರಿಗೆ ಯೋಗ ಕಲಿಸುವ ಗುರುವಾಗಿದ್ದಾನೆ, ಯೋಗ ಮಾಡುವಾಗ ಹಿಂದೂ ಮಂತ್ರದ ಬದಲು, ‘ಅಲ್ಲಾಹು ಹೂ’ ಎಂದು ಉದ್ಗರಿಸುತ್ತಾನೆ. ಪಂಜಾಬ್ ಪ್ರಾಂತ್ಯದವನಾದ ಸಂಶಾದ್ ಕಳೆದ ಹಲವಾರು ವರ್ಷಗಳಿಂದ ಪಾಕಿಸ್ಥಾನದಾದ್ಯಂತ ಯೋಗವನ್ನು ಪ್ರಚಾರಪಡಿಸುತ್ತಿದ್ದಾನೆ. ಪತಂಜಲಿಯಂತೆ ಯೋಗ ಶಾಲೆಯೊಂದನ್ನೂ ಈತ ತೆರೆದಿದ್ದಾನೆ.
ಯೋಗ ಹುಟ್ಟಿದ್ದೇ ಪಾಕಿಸ್ಥಾನದಲ್ಲಿ ಎಂದು ಪ್ರತಿಪಾದಿಸುವ ಈತ, ಭಾರತದಲ್ಲಿ ರಾಮ್ದೇವ್ ಯೋಗ ಪ್ರಚಾರ ಮಾಡುತ್ತಿರುವಂತೆ ನಾನೂ ಪಾಕ್ನಲ್ಲಿ ಯೋಗವನ್ನು ಪ್ರಚಾರ ಮಾಡುತ್ತಿದ್ದೇನೆ. ಯೋಗ ಆರೋಗ್ಯ ವೃದ್ಧಿಗೆ ಅತ್ಯುತ್ತಮ ಅಸ್ತ್ರ. ಇದು ಯಾವುದೇ ಧರ್ಮಕ್ಕೆ ಸೇರಿದ್ದಲ್ಲ. ಈ ಬಗ್ಗೆ ಭಾರತದಲ್ಲಿ ಎದ್ದಿರುವ ವಿವಾದ ಕೇವಲ ರಾಜಕೀಯ ಪ್ರೇರಿತ ಎನ್ನುತ್ತಾನೆ.
ಯೋಗದಿಂದ ಪತ್ನಿಯ ಅಸ್ತಮಾ ಕಾಯಿಲೆ ದೂರ ಮಾಡಿರುವ ಈತ, ಇತರರಿಗೂ ಯೋಗ ಪಾಠ ಹೇಳಿಕೊಡುತ್ತಾನೆ.
ಅದೇನೆಯಿರಲಿ ಯೋಗ ಮುಸ್ಲಿಂ ವಿರೋಧಿ, ಕೋಮುವಾದ ಎಂದು ಬೊಬ್ಬಿಡುವವರು ಸಂಶಾದ್ ಮತ್ತು ಆತನ ಯೋಗದತ್ತ ತುಸು ಕಣ್ಣೊರಳಿಸಿ ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.