ನವದೆಹಲಿ: ಭಾರತದ ಅಗ್ರಗಣ್ಯ ಬ್ಯಾಟ್ಸ್ವುಮೆನ್ ಮಿಥಾಲಿ ರಾಜ್ ಅವರು, ಟಿ20 ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಭಾರತದ ಅತೀಹೆಚ್ಚಿನ ರನ್ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬರೋಬ್ಬರಿ 2232 ರನ್ಗಳನ್ನು ತನ್ನ ಅಕೌಂಟ್ನಲ್ಲಿ ಇಟ್ಟುಕೊಂಡಿರುವ ಮಿಥಾಲಿ, ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡ ಎರಡಲ್ಲೂ ಟಿ20 ವಿಭಾಗದಲ್ಲಿ ಅತೀ ಹೆಚ್ಚು ರನ್ ಗಳಿಸಿದಾಕೆ ಎನಿಸಿಕೊಂಡಿದ್ದಾರೆ.
ರನ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗಿಂತಲೂ ಮಿಥಾಲಿ ಮುಂದಿದ್ದಾರೆ. ರೋಹಿತ್ ಶರ್ಮಾ ಅವರಿಗಿಂತ ತುಸು ಅಂತರದಲ್ಲಿ ಮುಂದಿದ್ದಾರೆ. ಶರ್ಮಾ 2207 ರನ್ಗಳನ್ನು ಪಡೆದುಕೊಂಡಿದ್ದಾರೆ. ಕೊಹ್ಲಿ 2102 ರನ್ ಹೊಂದಿದ್ದಾರೆ.
source: www.timesnownews.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.