ಭೋಪಾಲ್: ಸರ್ಕಾರಿ ಆವರಣದಲ್ಲಿ ಆರ್ಎಸ್ಎಸ್ ಶಾಖೆಗಳನ್ನು ನಿಷೇಧಿಸುವುದಾಗಿ ಮತ್ತು ಸರ್ಕಾರಿ ಉದ್ಯೋಗಿಗಳು ಶಾಖೆಗಳಿಗೆ ತೆರಳುವುದನ್ನು ನಿರ್ಬಂಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿರುವ ಮಧ್ಯಪ್ರದೇಶ ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
‘ಮಂದಿರ ಮಾಡಲು ಬಿಡುವುದಿಲ್ಲ, ಶಾಖೆ ನಡೆಸಲು ಬಿಡುವುದಿಲ್ಲ ಎಂಬ ತತ್ವದಲ್ಲಿ ಕಾಂಗ್ರೆಸ್ಗೆ ನಂಬಿಕೆಯಿದೆ. ಇದೇ ಕಾಂಗ್ರೆಸ್ಸಿಗರು ಈ ಹಿಂದೆ ಶ್ರೀರಾಮ ದೇವರೇ ಅಲ್ಲ ಎಂದಿದ್ದರು. ಇದಕ್ಕಾಗಿಯೇ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಸುಪ್ರೀಂನಲ್ಲಿ ಅಯೋಧ್ಯಾ ವಿಚಾರ ಚರ್ಚೆಗೆ ಅಡ್ಡಿಪಡಿಸಿದ್ದರು. ರಾಮ ಮಂದಿರ ನಿರ್ಮಾಣವನ್ನು ಕಾಂಗ್ರೆಸ್ಸಿಗರು ವಿರೋಧಿಸುತ್ತಿದ್ದು, ಭಾವನೆಗಳನ್ನು ಕೆರಳಿಸುತ್ತಿದ್ದಾರೆ’ ಎಂದು ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಹೇಳಿದ್ದಾರೆ.
ಆರ್ಎಸ್ಎಸ್ನ್ನು ತುಳಿಯಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಿರಂತರ ಶ್ರಮಪಡುತ್ತಿದೆ ಎಂದು ಹರಿಹಾಯ್ದರು.
‘ಆರ್ಎಸ್ಎಸ್ಗೆ ನಿಷೇಧ ಹೇರಬೇಕೆಂದು ಈ ಹಿಂದೆ ದಿಗ್ವಿಜಯ್ ಸಿಂಗ್ ಹೇಳಿದ್ದರು. ಒಸಮಾ ಬಿನ್ ಲಾಡೆನ್ನನ್ನು ಒಸಮಾ ಜೀ ಎಂದು ಸಂಭೋದಿಸಿದವರು ಅವರು. ಝಾಕೀರ್ ನಾಯ್ಕ್ಗೆ ಆಹ್ವಾನ ನೀಡಿದವರು ಅವರು, ಈಗ ಮಾತ್ರ ಶಾಂತಿಯ ಪ್ರತಿಪಾದಕನಂತೆ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದರು.
source: ndtv
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.