ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದರೆ ಹೈದರಾಬಾದ್ ನಗರಕ್ಕೆ ಭಾಗ್ಯನಗರ ಎಂದು ಮರುನಾಮಕರಣಗೊಳಿಸುವುದಾಗಿ ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿದ್ದಾರೆ.
ಅಷ್ಟೇ ಅಲ್ಲದೇ, ಸಿಕಂದರಾಬಾದ್, ಕರೀಂನಗರಗಳ ಹೆಸರನ್ನೂ ಮರುನಾಮಕರಣಗೊಳಿಸುವುದಾಗಿ ಹೇಳಿದ್ದಾರೆ.
ಹಿಂದೆ ಹೈದರಾಬಾದ್ ಭಾಗ್ಯನಗರ್ ಆಗಿತ್ತು, 1590ರಲ್ಲಿ ಖುಲಿ ಖುತಾಬ್ ಶಾ ಇದನ್ನು ಹೈದರಾಬಾದ್ ಎಂದು ಬದಲಾಯಿಸಿ. ಇದಕ್ಕೆ ಮತ್ತೆ ಅದನ್ನು ಭಾಗ್ಯನಗರ ಮಾಡುತ್ತೇವೆ ಎಂದಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಮೊದಲ ಆದ್ಯತೆ ಅಭಿವೃದ್ಧಿಗೆ, ಬಳಿಕ ಹೆಸರು ಬದಲಾವಣೆಯ ಕಾರ್ಯ ಮಾಡುತ್ತೇವೆ. ರಾಷ್ಟ್ರಕ್ಕಾಗಿ, ತೆಲಂಗಾಣಕ್ಕಾಗಿ ತ್ಯಾಗ, ಸಮರ್ಪಣೆ ಶ್ರೇಷ್ಠರ ಹೆಸರು ನಗರಗಳಿಗೆ, ಊರುಗಳಿಗೆ ಇಡಬೇಕು. ಮೊಘಲರು ಇಟ್ಟ ಹೆಸರನ್ನು ತೆಗೆದು ಹಾಕಬೇಕು ಎಂದರು.
ರಾಜಾ ಸಿಂಗ್ ಗೋಶಮಹಲ್ ಕ್ಷೇತ್ರದ ಬಿಜೆಪಿ ಶಾಸಕ.
source:NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.