ನವದೆಹಲಿ: ವಿಶ್ವದಲ್ಲೇ ಅತೀ ಹೆಚ್ಚು ಮಹಿಳಾ ಪೈಲೆಟ್ಗಳನ್ನು ಹೊಂದಿರುವ ಹೆಗ್ಗಳಿಕೆ ಭಾರತದ್ದು, ಅಲ್ಲದೇ ಇಲ್ಲಿ ಮಹಿಳಾ ಪೈಲೆಟ್ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಇತ್ತೀಚಿಗೆ ಬಿಡುಗಡೆಯಾದ ವರದಿಯೊಂದರ ಪ್ರಕಾರ, ಭಾರತದಲ್ಲಿನ ಮಹಿಳಾ ಪೈಲೆಟ್ಗಳ ಸಂಖ್ಯೆ ಜಾಗತಿಕ ಸರಾಸರಿಗಿಂತ ಎರಡು ಪಟ್ಟು ಹೆಚ್ಚಿದೆ.
ಇಂಟರ್ನ್ಯಾಷನಲ್ ಸೊಸೈಟಿ ಆಫ್ ವುಮೆನ್ ಏರ್ಲೈನ್ ಪೈಲೆಟ್ಸ್ ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಪ್ರಕಾರ, ಜಗತ್ತಿನಲ್ಲಿನ ಒಟ್ಟು ಪೈಲೆಟ್ಗಳ ಪ್ರಮಾಣದಲ್ಲಿ ಶೇ 5.4ರಷ್ಟು ಮಹಿಳೆಯರಿದ್ದಾರೆ. ಭಾರತದ ಒಟ್ಟು ಪೈಲೆಟ್ಗಳ ಪ್ರಮಾಣದಲ್ಲಿ ಮಹಿಳೆಯರು ಶೇ 12.4ರಷ್ಟು ಇದ್ದಾರೆ.
ಭಾರತದಲ್ಲಿ 8,797 ಪೈಲೆಟ್ಗಳಿದ್ದಾರೆ, ಇದರಲ್ಲಿ 1,092 ಮಹಿಳಾ ಪೈಲೆಟ್ಗಳು. ಮಹಿಳಾ ಪೈಲೆಟ್ಗಳ ಪೈಕಿ 395 ಮಂದಿ ಕ್ಯಾಪ್ಟನ್ಗಳಾಗಿದ್ದಾರೆ.
source: timesofindia