ನವದೆಹಲಿ: ಭಾರತದ ಅತ್ಯಂತ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾದ ಬೆಳಕಿನ ಹಬ್ಬ ದೀಪಾವಳಿಯ ಗೌರವಾರ್ಥ ವಿಶ್ವಸಂಸ್ಥೆಯ ಪೋಸ್ಟಲ್ ಸಿಸ್ಟಮ್ ಸ್ಟ್ಯಾಂಪ್ವೊಂದನ್ನು ಬಿಡುಗಡೆಗೊಳಿಸಿದೆ.
ದೀಪ ಮತ್ತು ಹಣತೆಯನ್ನೊಳಗೊಂಡ ಪೋಸ್ಟಲ್ ಸ್ಟ್ಯಾಂಪ್ ಇದಾಗಿದ್ದು, ಬೆಳಕಿನ ಹಬ್ಬದ ಮಹತ್ವವನ್ನು ಸಾರುತ್ತದೆ. ಯುಎನ್ ಕೇಂದ್ರ ಕಛೇರಿಗಳ ಪೋಸ್ಟ್ ಆಫೀಸ್, ಆನ್ಲೈನ್ಗಳಲ್ಲಿ ಈ ಸ್ಟ್ಯಾಂಪ್ ಲಭ್ಯವಿದೆ.
1.15 ಡಾಲರ್ ಮೌಲ್ಯದ್ದಾಗಿದ್ದು, ಇದು ಅಂತಾರಾಷ್ಟ್ರೀಯ ಅಂಚೆ ಪತ್ರಗಳ ಮೂಲ ದರವಾಗಿದೆ. 10 ಸ್ಟ್ಯಾಂಪ್ಗಳನ್ನು ಒಳಗೊಂಡ ಶೀಟ್ಗಳ ಮೂಲಕ ಇದನ್ನು ಮಾರಾಟ ಮಾಡಲಾಗುತ್ತದೆ. ದೀಪಾವಳಿಗಾಗಿ ಬೆಳಕಿನಿಂದ ಕಂಗೊಳಿಸಿದ ಯುಎನ್ ಕೇಂದ್ರ ಕಛೇರಿಯ ದೊಡ್ಡ ಚಿತ್ರ ಇದರಲ್ಲಿ ಇರುತ್ತದೆ.
ಕಳೆದ ತಿಂಗಳೇ ಇದರ ಬಿಡುಗಡೆಯಾಗಿದ್ದು, ಪ್ರಸ್ತುತ ಯುಎನ್ ಕೇಂದ್ರ ಕಛೇರಿ ಪೋಸ್ಟ್ ಆಫೀಸ್ಗಳಲ್ಲಿ ಇದು ಲಭ್ಯವಿದೆ.
ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟ್ರೆಸ್ ಟ್ವಿಟರ್ನಲ್ಲಿ ಇದರ ಫೋಟೋವನ್ನು ಹಂಚಿಕೊಂಡಿದ್ದಾರೆ.
source: newsbharati
The @UN celebrates the festival of lights by releasing our first set of #Diwali stamps commemorating the victory of light over darkness, good over evil and knowledge over ignorance. #HappyDiwali pic.twitter.com/CDgGlURvhS
— United Nations India (@UNinIndia) November 7, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.