ಅಯೋಧ್ಯಾ: ಅಯೋಧ್ಯಾದಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಆಯೋಜಿಸಿದ್ದ ಭವ್ಯ ದೀಪಾವಳಿ ಸಮಾರಂಭ ಈಗ ಗಿನ್ನಿಸ್ ವಿಶ್ವ ದಾಖಲೆಯ ಪುಟ ಸೇರಿದೆ.
ಸರಯೂ ನದಿ ತೀರದಲ್ಲಿ 3 ಲಕ್ಷ ಹಣತೆಗಳನ್ನು ಬೆಳಗಿಸುವ ಮೂಲಕ ಅತ್ಯಂತ ಅದ್ಧೂರಿಯಾಗಿ ದೀಪಾವಳಿಯನ್ನು ಆಚರಿಸಲಾಗಿದ್ದು, ಸ್ವರ್ಗಲೋಕವೇ ಧರೆಗಿಳಿದಂತೆ ಬೆಳಕಿನ ಲೋಕ ಕಂಗೊಳಿಸಿದೆ.
ಕೇವಲ 5ನಿಮಿಷದಲ್ಲಿ 3,01,152 ಹಣತೆಗಳನ್ನು ಬೆಳಗಿಸಲಿದೆ. ಇದು ಗಿನ್ನಿಸ್ ದಾಖಲೆಯ ಪುಟಕ್ಕೆ ಸೇರ್ಪಡೆಗೊಂಡಿದೆ.
ಶ್ರೀರಾಮನ ಜನಮ ಸ್ಥಳದ ಈ ಅದ್ಧೂರಿ ’ದೀಪೋತ್ಸವ’ ಕಾರ್ಯಕ್ರಮಕ್ಕೆ ದಕ್ಷಿಣ ಕೊರಿಯಾದ ಮೊದಲ ಮಹಿಳೆ ಕಿಮ್ ಜುಂಗ್ ಸೂಕ್ ಅವರು ಅತಿಥಿಯಾಗಿ ಆಗಮಿಸಿದ್ದರು. ಯೋಗಿಯೊಂದಿಗೆ ಅವರೂ ಸರಯೂ ನದಿಗೆ ಆರತಿ ಬೆಳಗಿದರು.
ಅಯೋಧ್ಯಾದ ರಾಮ್ ಕೀ ಪೈಡಿಯಲ್ಲಿ 3.35 ಲಕ್ಷ ದೀಪಗಳನ್ನು ಉರಿಸುವುದು ಟಾರ್ಗೆಟ್ ಆಗಿತ್ತು. ಕಳೆದ ವರ್ಷ 1.75 ಲಕ್ಷ ಹಣತೆಗಳನ್ನು ಉರಿಸಲಾಗಿತ್ತು.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.