ರಾಯ್ಪುರ: ಚುನಾವಣಾ ಕಣವಾಗಿರುವ ಛತ್ತೀಸ್ಗಢದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮೊದಲ ಪ್ರಚಾರ ಸಮಾವೇಶವನ್ನು ಹಮ್ಮಿಕೊಳ್ಳಲಿದ್ದಾರೆ.
ಬಸ್ತರ್ ಜಿಲ್ಲೆಯ ಜಗ್ದಲ್ಪುರ್ದಲ್ಲಿ ಮೋದಿ ಸಮಾವೇಶ ಜರುಗಲಿದೆ. ಬೆಳಿಗ್ಗೆ 11.20ರ ಸುಮಾರಿಗೆ ರಾಯ್ಪುರ ವಿಮಾನನಿಲ್ದಾಣಕ್ಕೆ ಆಗಮಿಸುವ ಅವರು ಬಳಿಕ ಹೆಲಿಕಾಫ್ಟರ್ ಮೂಲಕ ಜಗ್ದಲ್ಪುರ್ಗೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಮಾವೇಶ ಜರುಗಲಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೂ ಇಂದಿನಿಂದಲೇ ಛತ್ತೀಸ್ಗಢದಲ್ಲಿ ಪ್ರಚಾರ ಸಮಾವೇಶವನ್ನು ಆರಂಭಿಸಲಿದ್ದಾರೆ.
ನವೆಂಬರ್ 12ರಂದು ಮೊದಲ ಹಂತದ ಚುನಾವಣೆ ಅಲ್ಲಿ ಜರುಗಲಿದ್ದು, ನಕ್ಸಲ್ ಪೀಡಿತ 18 ಕ್ಷೇತ್ರಗಳಲ್ಲಿ ಚುನಾವಣೆ ಜರುಗಲಿದೆ. ಇದರಲ್ಲಿ 12 ಕ್ಷೇತ್ರಗಳು ಬುಡಕಟ್ಟು ಸಮುದಾಯ ಮೀಸಲು ಕ್ಷೇತ್ರಗಳಾಗಿವೆ.
ಉಳಿದ 72 ಕ್ಷೇತ್ರಗಳಿಗೆ ನವೆಂಬರ್ 20ರಂದು ಚುನಾವಣೆ ಜರುಗಲಿದೆ. ಡಿಸೆಂಬರ್ 1ರಂದು ಫಲಿತಾಂಶ ಹೊರಬೀಳಲಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.