ನವದೆಹಲಿ: ದಂತೇರಾದ ಶುಭ ಸಂದರ್ಭದಲ್ಲಿ ಸೋಮವಾರ, ಯೋಗ ಗುರು ಬಾಬಾ ರಾಮ್ದೇವ್ ರಾಷ್ಟ್ರ ರಾಜಧಾನಿಯಲ್ಲಿ ಪತಂಜಲಿಯ ವಸ್ತ್ರ ಮಳಿಗೆಯನ್ನು ಉದ್ಘಾಟಿಸಿದ್ದಾರೆ. ದೆಹಲಿಯ ನೇತಾಜಿ ಸುಭಾಷ್ ಪ್ರದೇಶದಲ್ಲಿ ‘ಪತಂಜಲಿ ಪರಿಧನ್’ ಎಂಬ ಹೆಸರಿನ ಈ ವಸ್ತ್ರ ಮಳಿಗೆ ನಿರ್ಮಾಣವಾಗಿದೆ.
ಪತಂಜಲಿ ಪರಿಧನ್ನಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಬೇಕಾದ ಲೈವ್ಫಿಟ್, ಆಸ್ತ ಮತ್ತು ಶಂಕರ್ ಬ್ರ್ಯಾಂಡ್ನ ಉಡುಪುಗಳು ಇಲ್ಲಿ ಲಭ್ಯವಿದೆ. ಡೆನಿಮ್, ಸಾಮಾಣ್ಯ ಉಡುಗೆಯಿಂದ ಹಿಡಿದು ಸಾಂಪ್ರದಾಯಿಕ, ಪಾರಂಪರಿಕ ಉಡುಗೆಗಳು ಇಲ್ಲಿ ಲಭ್ಯವಿದೆ. ಸುಮಾರು 3,000 ಬಗೆಯ ವಸ್ತ್ರ ವಿನ್ಯಾಸಗಳನ್ನು ನೀಡುತ್ತೇವೆ ಎಂಬ ಭರವಸೆಯನ್ನು ಬಾಬಾ ನೀಡಿದ್ದಾರೆ.
‘ಪತಂಜಲಿ ಪರಿಧನ್’ನಲ್ಲಿ ಜೀನ್ಸ್ನಿಂದ ಹಿಡಿದು ಹಲವಾರು ಬಗೆಯ ವಸ್ತ್ರಗಳು ಲಭ್ಯವಿದೆ. ವಿದೇಶಿ ಕಂಪನಿಗಳಿಗೆ ಸ್ಪರ್ಧೆ ನೀಡಲು ಇದನ್ನು ಸ್ಥಾಪನೆ ಮಾಡಲಾಗಿದೆ’ ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.
‘ಖಾದೀ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕಾರಣವಾದ ಮಾದರಿಯಲ್ಲೇ, ಪತಂಜಲಿ ಪರಿಧನ್ ದೇಶದಲ್ಲಿ ಆರ್ಥಿಕ ಸ್ವಾತಂತ್ರ್ಯದಲ್ಲಿ ಹೊಸ ಕ್ರಾಂತಿ ಮಾಡಲಿದೆ. ಬಟ್ಟೆ ಸರಕು ಮಾತ್ರವಲ್ಲ, ನಮ್ಮ ಸ್ವಾಭಿಮಾನ, ಹೆಮ್ಮೆಯ ವ್ಯಕ್ತಿತ್ವದ ಪ್ರತೀಕ ಎಂದಿದ್ದಾರೆ.
source: buisness today
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.