ಅಯೋಧ್ಯಾ: ಶ್ರೀರಾಮನ ಜನ್ಮಸ್ಥಳ ಅಯೋಧ್ಯಾ ದೀಪಾವಳಿ ಸಡಗರದಲ್ಲಿ ಮುಳುಗಿದೆ. 3 ದಿನಗಳ ಕಾಲ ಜರುಗಲಿರುವ ’ದೀಪೋತ್ಸವ 2018’ ಇಂದಿನಿಂದ ಆರಂಭಗೊಳ್ಳಲಿದೆ.
ಅಯೋಧ್ಯಾದ ಬೀದಿ ಬೀದಿಗಳೂ ದೀಪಗಳಿಂದ ಕಂಗೊಳಿಸಲಿದೆ. ದಕ್ಷಿಣ ಕೊರಿಯಾದ ಮೊದಲ ಮಹಿಳೆ ಕಿಮ್ ಜೂಂಗ್ ಸೂಕ್ ಅವರು ವೈಭೋವೋಪೇತ ದೀಪಾವಳಿಯನ್ನು ಸಾಕ್ಷೀಕರಿಸಲಿದ್ದಾರೆ.
ದೀಪಾವಳಿ ಸಂಭ್ರಮದ ವೇಳೆಯೇ ಸರಯೂ ನದಿ ತೀರದಲ್ಲಿ ಶ್ರೀರಾಮನ ಭವ್ಯ ಪ್ರತಿಮೆ ನಿರ್ಮಾಣದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ ಅವರು ಘೋಷಣೆ ಮಾಡುವ ನಿರೀಕ್ಷೆ ಇದೆ. 100 ಅಡಿ ಎತ್ತರದ ರಾಮನ ಪ್ರತಿಮೆಯನ್ನು 330 ಕೋಟಿ ರೂಪಾಯಿಗಳಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.
ದಿವ್ಯಾಂಗ ಮಕ್ಕಳು ಯೋಗಿಗಾಗಿ ಹಾಡೊಂದನ್ನು ರಚನೆ ಮಾಡಿದ್ದು, ದೀಪಾವಳಿ ಸಮಾರಂಭದ ವೇಳೆ ಇದನ್ನು ಹಾಡಲಿದ್ದಾರೆ. ಸರಯೂ ನದಿ ತೀರದಲ್ಲಿ ರಾಮ ಮತ್ತು ಹನುಮನ ಮೂರ್ತಿಯನ್ನು ತಾತ್ಕಲಿಕವಾಗಿ ರಚನೆ ಮಾಡಲಾಗಿದೆ.
ಸಿಎಂ ಆದ ಬಳಿಕ ಯೋಗಿಯವರು ಪ್ರತಿವರ್ಷ ಅಯೋಧ್ಯಾದಲ್ಲಿ ‘ದೀಪೋತ್ಸವ’ವನ್ನು ಆಚರಿಸುತ್ತಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.