ಖ್ಯಾತ ಕಂಪ್ಯೂಟರ್ ವಿಜ್ಞಾನಿ ಮೈಕಲ್ ಡರ್ಟೌಜೋಸೆ ಅವರ 82ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗೂಗಲ್ ಡೂಡಲ್ ಅವರಿಗೆ ಗೌರವ ಸಮರ್ಪಿಸಿದೆ.
ಮರ್ಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನದ ವಿಭಾಗಗಳಲ್ಲಿ ಪ್ರೊಫೆಸರ್ ಆಗಿದ್ದ ಡರ್ಟೌಜೋಸ್ ಅವರು, 1974 ರಿಂದ 2001 ರವರೆಗೆ ಎಂಐಟಿ ಕಂಪ್ಯೂಟರ್ ಸೈನ್ಸ್ ಲ್ಯಾಬೋರೇಟರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.
ಡರ್ಟೌಜೋಸೆ ತನ್ನ ಕೈಯಲ್ಲಿ ಚಾಲ್ಕ್(ಸೀಮಿ ಸುಣ್ಣ) ಹಿಡಿದು ಬೋರ್ಡ್ ಮುಂದೆ ನಿಂತಿರುವ ಭಂಗಿಯಲ್ಲಿ ಇಂದಿನ ಡೂಡಲ್ನ್ನು ರೂಪಿಸಲಾಗಿದೆ. ಚಿತ್ರದ ಸುತ್ತ ಸಣ್ಣ ಕಂಪ್ಯೂಟರ್ಗಳು ಮತ್ತು ಅಂತರ್ಜಾಲಗಳು ಸುತ್ತುವರಿದಿದೆ.
ನಮ್ಮ ದೈನಂದಿನ ಜೀವನದಲ್ಲಿ ಅಂತರ್ಜಾಲದ ಪ್ರಭಾವ ಮತ್ತು ವೈಯಕ್ತಿಕ ಕಂಪ್ಯೂಟರ್ಗಳ ಜನಪ್ರಿಯತೆಯ ಬಗ್ಗೆ ಡರ್ಟೌಜೋಸ್ ಪ್ರತಿಪಾದನೆ ಮಾಡಿದ್ದರು. ಅವರು ಎಂಐಟಿಯಲ್ಲಿ ಕಂಪ್ಯೂಟರ್ಗಳ ಸಂಭಾವ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡಿದರು.
1936ರ ನವೆಂಬರ್ 5ರಂದು ಇವರು ಗ್ರೀಸ್ ಅಥೇನ್ನಲ್ಲಿ ಜನಿಸಿದ್ದರು.
source: news18
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.