ನವದೆಹಲಿ: ಭಾರತದ ಅಗ್ರಗಣ್ಯ ಕ್ರಿಕೆಟಿಗರಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ಅವರು, ಗುರುವಾರ ಐಸಿಸಿಯ ಹಾಲ್ ಆಫ್ ಫೇಮ್ಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಭಾರತ ಮತ್ತು ವೆಸ್ಟ್ಇಂಡೀಸ್ ನಡುವಣ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಸರಳ ಸಮಾರಂಭದಲ್ಲಿ, ದ್ರಾವಿಡ್ ಅವರನ್ನು ಐಸಿಸಿ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಳಿಸಲಾಯಿತು. ಲೆಜೆಂಡರಿ ಓಪನರ್ ಸುನೀಲ್ ಗಾವಸ್ಕರ್ ಅವರು ಸಮಾರಂಭದ ನೇತೃತ್ವ ವಹಿಸಿದರು.
ಈ ಗೌರವಕ್ಕೆ ಪಾತ್ರರಾಗುತ್ತಿರುವ ಭಾರತದ ಐದನೇ ಕ್ರಿಕೆಟರ್ ದ್ರಾವಿಡ್ ಆಗಿದ್ದು, ಇದಕ್ಕೂ ಮುನ್ನ ಬಿಶನ್ ಸಿಂಗ್ ಬೇಡಿ, ಕಪಿಲ್ ದೇವ್, ಸುನೀಲ್ ಗಾವಸ್ಕರ್, ಅನಿಲ್ ಕುಂಬ್ಳೆ ಹಾಲ್ ಆಫ್ ಫೇಮ್ನಲ್ಲಿ ಸೇರ್ಪಡೆಯಾಗಿದ್ದಾರೆ.
ಭಾರತದ ಗೋಡೆ ಎಂದು ಕರೆಸಿಕೊಳ್ಳು ದ್ರಾವಿಡ್, 164 ಟೆಸ್ಟ್ಗಳನ್ನು ಆಡಿದ್ದು, 13,288 ರನ್ಗಳನ್ನು ಕಲೆ ಹಾಕಿದ್ದಾರೆ.
ಜುಲೈ 2ರಂದು ಅವರು ಹಾಲ್ ಆಫ್ ಫೇಮ್ಗೆ ಸೇರ್ಪಡೆಯಾಗುವ ಬಗ್ಗೆ ಘೋಷಣೆಯಾಗಿತ್ತು.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.