ನವದೆಹಲಿ: ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ ಇನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಡಿರುವ ಹೃದಯಸ್ಪರ್ಶಿ ಟ್ವಿಟ್ಗಳು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಇನ್ನಿಲ್ಲದಂತೆ ವೈರಲ್ ಆಗುತ್ತಿದೆ.
ಮೋದಿ ತನಗೆ ಕಳುಹಿಸಿಕೊಟ್ಟಿರುವ ಅತ್ಯದ್ಭುತ ‘ಮೋದಿ ಜಾಕೆಟ್’ಗಳಿಗಾಗಿ ಧನ್ಯವಾದಗಳನ್ನು ತಿಳಿಸಿ ಮೂನ್ ಅವರು ಟ್ವಿಟ್ ಮಾಡಿದ್ದಾರೆ. ಮೋದಿ ಜಾಕೆಟ್ ತೊಟ್ಟುಕೊಂಡ ಫೋಟೋಗಳನ್ನೂ ಶೇರ್ ಮಾಡಿದ್ದಾರೆ.
ಸರಣಿ ಟ್ವಿಟ್ ಮಾಡಿರುವ ಅವರು, ‘ಭಾರತದ ಪ್ರಧಾನಿ ನರೇಂದ್ರ ಮೋದಿಯವರು ನನಗೆ ಅತ್ಯದ್ಭುತ ಗಾರ್ಮೆಂಟ್ಗಳನ್ನು ಕಳುಹಿಸಿಕೊಟ್ಟಿದ್ದಾರೆ.
‘ಮೋದಿ ವೆಸ್ಟ್’ ಎಂದು ಕರೆಯಲ್ಪಡುವ ಈ ಗಾರ್ಮೆಂಟ್ ಭಾರತದ ಸಾಂಪ್ರದಾಯಿಕ ಉಡುಗೆಯ ಆಧುನಿಕ ರೂಪವಾಗಿದೆ. ಕೊರಿಯಾದಲ್ಲೂ ಇದನ್ನು ಸುಲಭವಾಗಿ ಧರಿಸಬಹುದು. ಪರಿಪೂರ್ಣ ಫಿಟ್ಟಿಂಗ್ ಹೊಂದಿವೆ’ ಎಂದಿದ್ದಾರೆ.
‘ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಈ ಜಾಕೆಟ್ನಲ್ಲಿ ನೀವು ಚೆನ್ನಾಗಿ ಕಾಣುತ್ತಿದ್ದೀರಾ ಎಂದಿದ್ದೆ. ಅವರು ನನ್ನ ಸೈಝ್ನ ಕುರ್ತಾಗಳನ್ನು ನನಗೆ ವಿಶೇಷವಾಗಿ ವಿನ್ಯಾಸಪಡಿಸಿ ಕಳುಹಿಸಿಕೊಟ್ಟಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ’ ಎಂದಿದ್ದಾರೆ.
ಅಲ್ಲದೇ ಕೊರಿಯಾದ ‘ಸಿಯೋಲ್ ಪೀಸ್ ಪ್ರೈಝ್’ ಜಯಿಸಿರುವುದಕ್ಕೂ ಅವರು ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
Prime Minister @narendramodi of India sent me some gorgeous garments. These are modernized versions of traditional Indian costume, known as the ‘Modi Vest’, that can also be worn easily in Korea. They fit perfectly. pic.twitter.com/3QTFIczX6H
— 문재인 (@moonriver365) October 31, 2018
During my visit to India, I had told the Prime Minister @narendramodi that he looked great in those vests, and he duly sent them over, all meticulously tailored to my size. I would like to thank him for this kind gesture. pic.twitter.com/wRgekJSW16
— 문재인 (@moonriver365) October 31, 2018
source: ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.