ಬ್ರೈಲ್ ಲಿಪಿ ದೃಷ್ಟಿಹೀನರ ಪಾಲಿನ ಬೆಳಕು. ಕಾಣದ ಅಕ್ಷರಗಳನ್ನು ಕೇವಲ ಸ್ಪರ್ಶ ಮಾತ್ರದಿಂದಲೇ ಓದಲು, ಅರ್ಥೈಸಲು ಅವರಿಗೆ ಇದು ಸಹಕಾರಿಯಾಗುತ್ತದೆ. ಕಳೆದ ಎರಡು ಶತಮಾನಗಳಿಂದ ವಿಶ್ವದಾದ್ಯಂತ ಅಂಧರನ್ನು ಇದು ಸಬಲೀಕರಣಗೊಳಿಸುತ್ತಲೇ ಬಂದಿದೆ.
ಆದರೆ ಈಗ 23 ವರ್ಷದ ಭಾರತೀಯ ವಿಜ್ಞಾನಿ ರೂಪಂ ಮಿಶ್ರಾ, ತಮ್ಮ ಸ್ಟಾರ್ಟ್ಅಪ್ Manovue ಮೂಲಕ ಅಂಧರಿಗೆ ಜಗತ್ತನ್ನು ಅರ್ಥೈಸಲು ಪರ್ಯಾಯ ಮಾರ್ಗವನ್ನು ನೀಡಿದ್ದಾರೆ.
ವಿಶನ್ ಇಂಟೆಲಿಜೆನ್ಸ್ ಮತ್ತು ಇಂಟರ್ನೆಟ್ನ್ನು ಒಂದುಗೂಡಿಸಿದ ಧರಿಸಬಹುದಾದ ಡಿವೈಸ್ನ್ನು ಇವರು ಅಭಿವೃದ್ಧಿಡಿಸಿದ್ದಾರೆ. ಬ್ರೈಲ್ ಬದಲು ಈ ಡಿವೈಸ್ನ್ನು ಬಳಸಿ ಅಕ್ಷರಗಳನ್ನು ಓದಬಹುದಾಗಿದೆ. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಧಾರಿತ ಡಿವೈಸ್ ಇದಾಗಿದೆ.
‘Manovue ಪ್ರಮುಖವಾಗಿ ಧರಿಸಬಹುದಾದ ಡಿವೈಸ್ ಗ್ಲೌಸ್ ಮತ್ತು ಏಕೀಕೃತ ಮೊಬೈಲ್ ಆಪ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಬಳಸಿ ಅಂಧರು ಪ್ರಿಂಟ್ ಆದ ಅಕ್ಷರಗಳ ಮೇಲೆ ಕೈಬೆರಳನ್ನು ಆಡಿಸಿ ಓದಬಹುದಾಗಿದೆ.’
ಇವರ Manovue ಸಂಸ್ಥೆ ವಿಶ್ವದ ಮೊದಲ ಇಂಟೆಲಿಜೆಂಟ್ ಪಸರ್ನಲ್ ಅಸಿಸ್ಟೆಂಟ್ ಸಿಸ್ಟಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಮ್ಮ ಅದ್ಭುತ ಇನ್ನೋವೇಶನ್ಗಾಗಿ ಇವರು, ‘ವರ್ಲ್ಡ್ ಹೆಲ್ತ್ ಸಮಿತ್ ಸ್ಟಾಟ್ಅಪ್ ಅವಾರ್ಡ್’ನ್ನು ಪಡೆದುಕೊಂಡಿದ್ದಾರೆ. ಯುಎನ್ ಯೂತ್ ಫೋರಂ ಆಂಡ್ ಇನ್ನೋವೇಶನ್ 2019ಗೂ ಇವರು ಶಾರ್ಟ್ಲಿಸ್ಟ್ ಆಗಿದ್ದಾರೆ.
source: betterindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.