ಉತ್ತರ ಭಾರತೀಯರಲ್ಲಿ ಕೆಲವರು ಎಲ್ಲಾ ದಕ್ಷಿಣ ಭಾರತೀಯರನ್ನೂ ಮದ್ರಾಸಿ ಎಂದು ಕರೆಯುವುದನ್ನು ಕಂಡಿದ್ದೇವೆ. ಬೆಂಗಳೂರೇ ಕರ್ನಾಟಕ ಎಂದು ಭಾವಿಸಿರುವ ವಿದೇಶೀಯರೂ ಇದ್ದಾರೆ. ಆದರೆ ಈ ದೇಶದ ಪ್ರಧಾನಿಯೊಬ್ಬರ ಮಗ ಹಾಗೂ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವವರೊಬ್ಬರು ಯಾವುದೋ ರಾಜ್ಯವನ್ನು ಇನ್ಯಾವುದೋ ರಾಜ್ಯದ ಹೆಸರಿನಿಂದ ಕರೆದರೆ?
ಹೌದು, ಅಂತಹಾ ಎಡವಟ್ಟಿನ ಕೆಲಸವೊಂದು ಈ ದೇಶವನ್ನು ಬಹು ಧೀರ್ಘ ಕಾಲ ಆಳಿದ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧೀ ವಂಶದ ಕುಡಿಯಾದ ಹಾಗೂ ಮುಂದಿನ ಪ್ರಧಾನಿಯೆಂದೇ ಬಿಂಬಿತವಾಗಿರುವ ಶ್ರೀ ರಾಹುಲ್ ಗಾಂಧಿಯವರು ಸೈನಿಕ ಶಾಲೆ ವಿದ್ಯಾರ್ಥಿನಿಯರ ಸಾಧನೆಗಳನ್ನು ಹೊಗಳುವ ಭರದಲ್ಲಿ ರಾಜ್ಯದ ಹೆಸರನ್ನು ಮಿಜೋರಾಂ ಬದಲು ಮಣಿಪುರ ಎಂದು ಫೇಸ್ ಬುಕ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ಇದನ್ನು ಗಮನಿಸಿದ ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಲವೀಯ ಅವರು ‘ಮಣಿಪುರ ಮತ್ತು ಮಿಜೋರಾಂ ಪ್ರತ್ಯೇಕ ರಾಜ್ಯಗಳು ಎಂಬುದನ್ನು ರಾಹುಲ್ ಗಾಂಧಿ ತಿಳಿದುಕೊಳ್ಳಬೇಕು. ಈ ವಿಷಯವನ್ನು ನೂರು ಬಾರಿ ಬರೆದು ಅಭ್ಯಾಸ ಮಾಡುವುದು ಒಳಿತು’ ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ತಪ್ಪು ತಿಳಿದ ಕೂಡಲೇ ಮತ್ತೆ ತಮ್ಮ ಪೋಸ್ಟ್ ತಿದ್ದುವ ಮೂಲಕ ಸರಿಪಡಿಸಿದ್ದಾರಾದರೂ ಅಷ್ಟರಲ್ಲಾಗಲೇ ಅದು ಇಡೀ ದೇಶವನ್ನು ತಲುಪಿಯಾಗಿತ್ತು!
ಇದೇ ಸೋಮವಾರ ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು “ಪನಾಮಾ ಪೇಪರ್ಸ್ ಪ್ರಕರಣದಲ್ಲಿ “ಬಿಜೆಪಿಯ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪುತ್ರನ ಹೆಸರಿದೆ. ಆದರೆ, ಈ ವರೆಗೆ ಪುತ್ರನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದ್ದರು. ಅದಾದ ಕೆಲವೇ ಗಂಟೆ ನಂತರ ಪ್ರತಿಕ್ರಿಯೆ ನೀಡಿದ್ದ ಶಿವರಾಜ್ ಸಿಂಗ್ ಚೌಹಾಣ್ ಪುತ್ರ ಕಾರ್ತಿಕೇಯ ಚೌಹಾಣ್, ‘ಇಂತಹ ಹೇಳಿಕೆಯಿಂದ ನನ್ನ ಮತ್ತು ನನ್ನ ಕುಟುಂಬದ ವರ್ಚಸ್ಸಿಗೆ ಧಕ್ಕೆಯಾಗಿದೆ. 48 ಗಂಟೆಯೊಳಗೆ ರಾಹುಲ್ ಕ್ಷಮೆ ಯಾಚಿಸದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದು ಗುಡುಗಿದ್ದರು.
ಅದಕ್ಕೆ ಉತ್ತರಿಸಿದ್ದ ರಾಹುಲ್ ಗಾಂಧೀ ‘ಪನಾಮಾ ಪೇಪರ್ಸ್ ಸೋರಿಕೆಯಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪುತ್ರನ ಪಾತ್ರ ಇಲ್ಲ. ನನ್ನಿಂದ ತಪ್ಪು ಗ್ರಹಿಕೆಯಾಗಿದೆ’ ಎಂದು ರಾಹುಲ್ ಸಮಜಾಯಿಷಿ ನೀಡಿದ್ದರು.
ಒಟ್ಟಿನಲ್ಲಿ ತಾವು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿರುವ ರಾಹುಲ್ ಗಾಂಧಿಯವರು ಈ ರೀತಿ ಪದೇ ಪದೇ ಪೇಚಿಗೆ ಸಿಲುಕುತ್ತಿರುವುದು ಕಾಂಗ್ರೆಸ್ ಪಕ್ಷ ಹಾಗೂ ಅದರ ಸಹವರ್ತಿ ಪಕ್ಷಗಳಿಗೆ ಮುಜುಗರವನ್ನುಂಟು ಮಾಡುತ್ತಿರುವುದಂತೂ ಸುಳ್ಳಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.