ಅಹ್ಮದಾಬಾದ್ : ವಿಶ್ವದ ಅತೀ ಎತ್ತರದ ಪ್ರತಿಮೆ ಗುಜರಾತ್ನಲ್ಲಿ ಇಂದು ಲೋಕಾರ್ಪಣೆಗೊಂಡಿದೆ. ಸರ್ದಾರ್ ಪಟೇಲರ ಗೌರವಾರ್ಥ ನಿರ್ಮಾಣಗೊಂಡಿರುವ ಈ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು ಹೌದು.
ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಈ ಪ್ರತಿಮೆ ನವೆಂಬರ್ 1ರಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಗುಜರಾತ್ ರಾಜ್ಯ ಪ್ರವಾಸೋದ್ಯಮ ಇಲಾಖೆ ಈಗಾಗಲೇ ಈ ಬಗೆಗಿನ ಜಾಹೀರಾತುಗಳನ್ನು ಹರಿಬಿಟ್ಟಿದೆ.
ಈ ಪ್ರತಿಮೆ ಗುಜರಾತ್ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನವನ್ನು ನೀಡಲಿದೆ. ಪ್ರತಿಮೆಯಲ್ಲಿನ ಗ್ಯಾಲರಿಯಲ್ಲಿ ನಿಂತರೆ ವಿಂದ್ಯಾ, ಸತ್ಪುರ ಪರ್ವತಶ್ರೇಣಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಏಕಕಾಲದಲ್ಲಿ 200 ಜನ ಈ ಗ್ಯಾಲರಿಯಲ್ಲಿ ನಿಂತು ವೀಕ್ಷಿಸಬಹುದು.
ಈಗಾಗಲೇ ಈ ಪ್ರದೇಶದಲ್ಲಿ ಗುಜರಾತ್ ಸರ್ಕಾರ 3 ಸ್ಟಾರ್ ಹೋಟೆಲ್, ಶಾಪಿಂಗ್ ಸೆಂಟರ್, ರಿಸರ್ಚ್ ಸೆಂಟರ್ಗಳನ್ನು ಸ್ಥಾಪನೆ ಮಾಡಿದೆ. ಹೈಸ್ಪೀಡ್ ಎಲೆವೇಟರ್ ಕೂಡ ಇದ್ದು, 400 ಅಡಿ ಎತ್ತರದವರೆಗೆ ಕೊಂಡೊಯ್ಯುತ್ತದೆ. ಇಲ್ಲಿ ನರ್ಮದಾ ನದಿ ಮತ್ತು ಸುತ್ತಲ ಪ್ರದೇಶದ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
ಸೆಲ್ಫಿ ತೆಗೆದುಕೊಳ್ಳಲು ಪ್ರತ್ಯೇಕ ಸೆಲ್ಫಿ ಪಾಯಿಂಟ್ ಕೂಡ ಇದೆ. ಭಾರತದ ಏಕೀಕರಣವನ್ನು ಸಾರುವ ವೀಡಿಯೋವನ್ನು ಲೇಸರ್, ಲೈಟ್, ಸೌಂಡ್ಗಳ ಮೂಲಕ ವೀಕ್ಷಿಸಬಹುದು.
ಪ್ರತಿನಿತ್ಯ ಇಲ್ಲಿಗೆ 15 ಸಾವಿರ ಪ್ರವಾಸಿಗರು ಆಗಮಿಸಬಹುದು ಎಂಬ ನಿರೀಕ್ಷೆಯನ್ನು ಅಧಿಕಾರಿಗಳು ಹೊಂದಿದ್ದಾರೆ.
source: livemint
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.