ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಅನುಷ್ಠಾನಗೊಳಿಸಿರುವ ಆರ್ಥಿಕಾ ಸುಧಾರಣಾ ಕ್ರಮಗಳನ್ನು ಯುನೈಟೆಡ್ ಸ್ಟೇಟ್ಸ್ ಇಂಡಿಯಾ ಸ್ಟ್ರ್ಯಾಟಜಿಕ್ ಪಾಟ್ನರ್ಶಿಪ್ ಫೋರಂ ( USISPF)ನ ಬೋರ್ಡ್ ಸದಸ್ಯರು ಕೊಂಡಾಡಿದ್ದಾರೆ.
ಮೋದಿಯವರನ್ನು ಮಂಗಳವಾರ ಭೇಟಿಯಾದ ಸದಸ್ಯರು, ಅವರಿಗೆ ಸೋಮವಾರ ಜರುಗಿದ್ದ ‘ಇಂಡಿಯಾ ಲೀಡರ್ಶಿಪ್ ಸಮಿತ್’ನ ಫಲಿತಾಂಶದ ಬಗ್ಗೆ ವಿವರಿಸಿದರು. ಅಲ್ಲದೇ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಯ ಪರಸ್ಪರ ಪ್ರಯೋಜನಕಾರಿ ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಭಾರತದೊಂದಿಗಿನ ಸಂಬಂಧವನ್ನು ಇನ್ನಷ್ಟು ವೃದ್ಧಿಪಡಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮೋದಿ, ಭಾರತ ಮತ್ತು ಅಮೆರಿಕಾ ರಾಷ್ಟ್ರಗಳು ಪರಸ್ಪರ ಆರ್ಥಿಕ ಬಾಂಧವ್ಯದಿಂದಾಗಿ ಅಭೂತಪೂರ್ವ ಪ್ರಯೋಜನವನ್ನು ಪಡೆದುಕೊಂಡಿವೆ ಎಂದಿದ್ದಾರೆ.
ಅಲ್ಲದೇ, ಭಾರತದ ಸ್ಟಾರ್ಟ್ಅಪ್, ಎನರ್ಜಿ, ಆರೋಗ್ಯ ಸೇವೆ, ಡಿಜಿಟಲ್ ತಂತ್ರಜ್ಞಾನ ಮುಂತಾದ ನೂತನ ವಲಯಗಳಲ್ಲಿನ ಅವಕಾಶಗಳ ಸದ್ಭಳಕೆಯನ್ನು ಅಮೆರಿಕಾ ಕಂಪನಿಗಳು ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.