ನವದೆಹಲಿ: ತೀವ್ರ ತರನಾದ ಸೆಲ್ಫಿ ಗೀಳಿಗೆ ಒಳಗಾಗಿರುವ ಯುವಜನತೆ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಅಪಾಯಕಾರಿ ಜಾಗಗಳಲ್ಲಿ ನಿಂತು ಫೋಟೋ ತೆಗೆದುಕೊಳ್ಳುತ್ತಾರೆ. ಇದರಿಂದ ಅಪಾರ ಪ್ರಮಾಣದ ಸಾವುಗಳು ಸಂಭವಿಸುತ್ತಿವೆ. ಇಂತಹ ಸೆಲ್ಫಿ ಸಾವುಗಳನ್ನು ತಡೆಯುವ ಸಲುವಾಗಿಯೇ ಐಐಐಟಿ-ದೆಹಲಿ ಆ್ಯಪ್ ವೊಂದನ್ನು ಬಿಡುಗಡೆಗೊಳಿಸಿದೆ.
ಇಂದ್ರಪ್ರಸ್ಥ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ-ದೆಹಲಿ(ಐಐಐಟಿ-ದೆಹಲಿ) ಸೆಲ್ಫಿ ಡೆತ್ ತಡೆಯಲು ‘Saftie’ ಎಂಬ ಆ್ಯಪ್ನ್ನು ಅಭಿವೃದ್ಧಿಪಡಿಸಿದೆ.
‘ಈ ಅಪ್ಲಿಕೇಶನ್ ಸೆಲ್ಫಿಗೆ ಸಂಬಂಧಿಸಿದ ಸಾವುಗಳನ್ನು ಕಡಿಮೆ ಮಾಡುವ ಒಂದು ಪ್ರಯತ್ನವಾಗಿದ್ದು, ಇಲ್ಲಿ ಕ್ಯಾಮರಾ ಸೆರೆ ಹಿಡಿಯುತ್ತಿರುವ ಚಿತ್ರದ ನೈಜ-ಸಮಯದ ವಿಶ್ಲೇಷಣೆ ಮಾಡಲಾಗುತ್ತದೆ ಮತ್ತು ದೃಶ್ಯವು ಅಪಾಯಕಾರಿ ಎಂದು ಅನಿಸಿದರೆ ಮಧ್ಯಪ್ರವೇಶಿಸಿ ಬಳಕೆದಾರರಿಗೆ ಮಾಹಿತಿ ನೀಡುತ್ತದೆ. ಆಳ ಕಲಿಕಾ ತಂತ್ರಗಳನ್ನು ಬಳಸಿ ಆ್ಯಪ್ ಮಧ್ಯಪ್ರವೇಶ ಮಾಡುತ್ತದೆ’ ಎಂದು ಐಐಐಟಿ ಪ್ರಾಧ್ಯಾಪಕ ಪೊಣ್ಣುರಂಗಂ ಕುಮಾರಗಾರು ಹೇಳಿದ್ದಾರೆ.
ಅಂದರೆ, ನಾವು ರೈಲ್ವೇ ಟ್ರ್ಯಾಕ್, ಆಳವಾದ ನೀರಿನ ಸಮೀಪಗಳಲ್ಲಿ ನಿಂತಿದ್ದರೆ ‘ನೀವು ಅಸುರಕ್ಷಿತ ಪ್ರದೇಶದಲ್ಲಿದ್ದೀರಿ’ ಎಂಬ ನೋಟಿಫಿಕೇಶನನ್ನು ಈ ಆ್ಯಪ್ ನೀಡುತ್ತದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.