ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ನಡುವಣ ಮಾತುಕತೆಯ ವೇಳೆ ಸೋಮವಾರ, ಉಭಯ ದೇಶಗಳ ನಡುವೆ 6 ಒಪ್ಪಂದಗಳಿಗೆ ಸಹಿ ಬಿದ್ದಿದೆ.
ಹೈಸ್ಪೀಡ್ ರೈಲ್ ಪ್ರಾಜೆಕ್ಟ್, ನೌಕಾ ಸಹಕಾರ, 2+2 ಮಾತುಕತೆ ಸೇರಿದಂತೆ ಒಟ್ಟು 6 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ.
ಮೋದಿ ಮತ್ತು ಅಬೆ ನಡುವೆ ದ್ವಿಪಕ್ಷೀಯ, ಪ್ರಾದೇಶಿಕ, ಜಾಗತಿಕ ವಿಷಯಗಳ ಬಗ್ಗೆ ಮಾತುಕತೆ ನಡೆದಿದ್ದು, ಇಂಡೋ-ಪೆಸಿಫಿಕ್ ಪ್ರಾದೇಶಿಕ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
13ನೇ ಭಾರತ-ಜಪಾನ್ ಸಮಿತ್ ವೇಳೆ ಉಭಯ ನಾಯಕರು, ದ್ವಿಪಕ್ಷೀಯ ಸಂಬಂಧದಲ್ಲಿನ ಬೆಳವಣಿಗೆಗಳ ಬಗ್ಗೆ ಮತ್ತು ಪರಸ್ಪರ ಸಹಕಾರಗಳ ಹೊಸ ಆಯಾಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಇಂಡೋ-ಪೆಸಿಫಿಕ್ ಭಾಗದ ಶಾಂತಿ ಮತ್ತು ಸಮೃದ್ಧಿಗಳ ಬಗ್ಗೆ ಚರ್ಚೆ ನಡೆಸಿದರು, ಚೀನಾದ ಪ್ರಭಾವದ ಬಗ್ಗೆ ಚರ್ಚಿಸಿದರು.
ವ್ಯಾಪಾರ, ತಂತ್ರಜ್ಞಾನ, ಹಂಚಿಕೊಂಡ ಸಮೃದ್ಧಿ ಮುಂತಾದ ವಿಷಯಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುವ ಬಗ್ಗೆ ಉಭಯ ನಾಯಕರು ಪರಸ್ಪರ ಸಮ್ಮತಿ ಸೂಚಿಸಿದ್ದಾರೆ.
source: HINDUSTANTIMES
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.