ನವದೆಹಲಿ: ಜೈನಮುನಿ ಆಚಾರ್ಯ ವಿದ್ಯಾಸಾಗರ್ ಅವರ ಶಾಖಾಹಾರಿ ತತ್ವಗಳಿಂದ ಪ್ರೇರಿತಗೊಂಡಿರುವ ಭಾರತದಲ್ಲಿನ ಫ್ರೆಂಚ್ ರಾಯಭಾರಿ ಅಲೆಗ್ಸಾಂಡರ್ ಝೀಗ್ಲೆರ್ ಅವರು ಸಂಪೂರ್ಣ ಶಾಖಾಹಾರಿಯಾಗಿ ಬದಲಾಗುವ ಪ್ರತಿಜ್ಞೆ ಮಾಡಿದ್ದಾರೆ.
ಅಲೆಗ್ಸಾಂಡರ್ ಅವರು ಗುರುವಾರ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಜರಾವೋಗೆ ಭೇಟಿ ನೀಡಿದ್ದರು. ಅಲ್ಲಿ ದೇಗುಲಗಳನ್ನು ಸಂದರ್ಶಿಸಿದ ಬಳಿಕ ವಿದ್ಯಾಸಾಗರ್ ಅವರನ್ನು ಭೇಟಿಯಾಗುವ ಇಂಗಿತದೊಂದಿಗೆ ಅವರ ಆಶ್ರಮಕ್ಕೆ ತೆರಳಿದರು.
ಆಶ್ರಮದಲ್ಲಿ ನೆಲದ ಮೇಲೆಯೇ ಕುಳಿತು ಆಚಾರ್ಯರ 20 ನಿಮಿಷಗಳ ಮಾತನ್ನು ಆಲಿಸಿದ ಅಲೆಗ್ಸಾಂಡರ್ ಮತ್ತು ಕುಟುಂಬ, ತಾವು ಸಸ್ಯಹಾರಿಗಳಾಗಿ ಬದಲಾಗುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಆಚಾರ್ಯರನ್ನು ಭೇಟಿಯಾಗಿ ಪುನೀತನಾಗಿರುವುದಾಗಿ ಅಲೆಗ್ಸಾಂಡರ್ ಹೇಳಿಕೊಂಡಿದ್ದಾರೆ.
source: Timesofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.