ಚೆನ್ನೈ: ದೇಶೀಯವಾಗಿ ನಿರ್ಮಿಸಲಾದ ಮೊತ್ತ ಮೊದಲ ಮೈಕ್ರೋಪ್ರೊಸೆಸರ್ನ್ನು ಐಐಟಿ-ಮದ್ರಾಸ್ ಶುಕ್ರವಾರ ಅನಾವರಣಗೊಳಿಸಿದೆ. ಇದನ್ನು ಮೊಬೈಲ್ ಕಾಂಪ್ಯೂಟಿಂಗ್ ಡಿವೈಸ್, ಎಂಬೆಡೆಡ್ ಲೋ-ಪವರ್ ವೈಯರ್ಲೆಸ್, ನೆಟ್ವರ್ಕ್ ಸಿಸ್ಟಮ್ಗಳಲ್ಲಿ ಬಳಸಬಹುದಾಗಿದೆ.
ರಕ್ಷಣೆ, ಪರಮಾಣು ಶಕ್ತಿ, ಸರ್ಕಾರಿ ಏಜೆನ್ಸಿ ಮುಂತಾದ ವಲಯಗಳಿಗೆ ಈ ಮೈಕ್ರೋಪ್ರೊಸೆಸರ್ ಅನುಕೂಲಕರವಾಗಿದೆ. ಐಐಟಿ ಮದ್ರಾಸ್ನ ಈ ಸಾಧನೆಯಿಂದ ಇತರ ದೇಶಗಳಿಂದ ಮೈಕ್ರೋಪ್ರೊಸೆಸರ್ ಆಮದು ಮಾಡಿಕೊಳ್ಳುವ ಪ್ರಮೇಯ ತಗ್ಗಲಿದೆ ಎಂಬ ನಿರೀಕ್ಷೆ ಇದೆ.
‘ಡಿಜಿಟಲ್ ಇಂಡಿಯಾದ ಉಗಮದೊಂದಿಗೆ ಹಲವಾಋಉ ಕಸ್ಟಮೈಸ್ಡ್ ಪ್ರೊಸೆಸರ್ ಕೋರ್ಸ್ಗಳ ಅಗತ್ಯತೆಯೂ ಇದೆ’ ಎಂದು ಪ್ರೊಫೆಸರ್ ಕಾಮಕೋಟಿ ವೀಝಿನಾಥನ್ ಹೇಳಿದ್ದಾರೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.