ನವದೆಹಲಿ: ಶಾಂತಿಗೆ ಭಂಗ ತರುವ ನಟೋರಿಯಸ್ ಪಾಕಿಸ್ಥಾನದ ವ್ಯಾಘ್ರ ಮುಖ ಜಗತ್ತಿನ ಮುಂದೆ ಮತ್ತೊಮ್ಮೆ ಪ್ರಸ್ತುತಗೊಂಡಿದೆ. ಸಿರಿಯಾಗಿಂತಲೂ ಈ ರಾಷ್ಟ್ರ ಜಾಗತಿಕ ಶಾಂತಿಗೆ ಅಪಾಯಕಾರಿಯಾಗಿದೆ ಎಂಬುದನ್ನು ಆಕ್ಸ್ಪರ್ಡ್ ವರದಿ ಬಹಿರಂಗಪಡಿಸಿದೆ.
ಪಾಕಿಸ್ಥಾನ ಜಾಗತಿಕ ಶಾಂತಿ ಮತ್ತು ಮಾನವೀಯತೆಗೆ ಸಿರಿಯಾಗಿಂತ ಮೂರು ಪಟ್ಟು ಹೆಚ್ಚು ಅಪಾಯಕಾರಿಯಾಗಿದೆ ಎಂದು ಆಕ್ಸ್ಪರ್ಡ್ ಯೂನಿವರ್ಸಿಟಿ ಮತ್ತು ಸ್ಟ್ರ್ಯಾಟಜಿಕ್ ಫೋರ್ಸೈಟ್ ಗ್ರೂಪ್ ಬಿಡುಗಡೆಗೊಳಿಸಿದ ವರದಿ ‘ಹ್ಯುಮ್ಯಾನಿಟಿ ಅಟ್ ರಿಸ್ಕ್-ಗ್ಲೋಬಲ್ ಟೆರರ್ ಥ್ರೆಟ್ ಇಂಡಿಕೆಂಟ್’ ತಿಳಿಸಿದೆ.
ಜಗತ್ತಿನ ಯಾವುದೇ ಭಾಗಕ್ಕಿಂತ ಪಾಕಿಸ್ಥಾನದಲ್ಲಿ ಅತೀಹೆಚ್ಚು ಭಯೋತ್ಪಾದಕ ಶಿಬಿರಗಳು, ಸುರಕ್ಷಿತ ಸ್ವರ್ಗಗಳು ಇವೆ. ಪಾಕ್ ಆಧಾರಿತ ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆ ಜಗತ್ತಿಗೆ ಮಾರಕವಾಗಿರುವ ಟಾಪ್ ಉಗ್ರ ಸಂಘಟನೆ ಎಂದು ವರದಿ ಹೇಳಿದೆ. ಅಲ್ಲದೇ ಅಫ್ಘಾನ್ ತಾಲಿಬಾನ್ ಕೂಡ ಟಾಪ್ ಸ್ಥಾನದಲ್ಲಿದ್ದು, ಇದಕ್ಕೆ ಪಾಕಿಸ್ಥಾನದ ಬೆಂಬಲ ಕೂಡ ಇದೆ ಎಂದಿದೆ.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿ ಬಾರಿ ಪಾಕಿಸ್ಥಾನ ಮುಖಭಂಗಕ್ಕೀಡಾಗುತ್ತಿದೆ, ಆದರೂ ತಾನು ಬಲಿಪಶು ಎಂಬಂತೆ ವರ್ತಿಸುವುದು ಅದರ ಹುಟ್ಟುಗುಣವಾಗಿದೆ.
source: ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.