ನವದೆಹಲಿ: ಸಮಾಜ ವಿಜ್ಞಾನದಲ್ಲಿ ಸಂಶೋಧನೆಗಳನ್ನು ಮಾಡ ಬಯಸುವವರಿಗೆ ಮಾನವ ಸಂಪನ್ಮೂಲ ಸಚಿವಾಲಯದ ನೂತನ ಯೋಜನೆಯಡಿ ಮಹತ್ವದ ಅವಕಾಶಗಳು ಲಭಿಸಲಿದ್ದು, ಈ ಯೋಜನೆಗೆ ರೂ.414 ಕೋಟಿಗಳನ್ನು ನೀಡಲು ಸಚಿವಾಲಯ ನಿರ್ಧರಿಸಿದೆ. ಅಲ್ಲದೇ ಭಾರತದ ಉನ್ನತ ಮತ್ತು ಜಾಗತಿಕ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ನಡೆಯುವ ವೈಜ್ಞಾನಿಕ ವಲಯದ ಜಂಟಿ ಸಂಶೋಧನೆಯ ಮತ್ತೊಂದು ಯೋಜನೆಗೂ ರೂ.418 ಕೋಟಿಗಳನ್ನು ನೀಡಲು ಸಚಿವಾಲಯ ಮುಂದಾಗಿದೆ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಶೋಧನಾ ಪ್ರವೃತ್ತಿಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು, ಸಮಾಜ ವಿಜ್ಞಾನ ಯೋಜನೆಯಲ್ಲಿ ಪ್ರಭಾವಶಾಲಿ ನೀತಿ ಸಂಶೋಧನೆ (Impactful Policy Research in Social Sciences scheme(IMPRESS)) ಮತ್ತು ಶೈಕ್ಷಣಿಕ ಮತ್ತು ಸಂಶೋಧನಾ ಸಹಭಾಗಿತ್ವದ ಉತ್ತೇಜನಾ ಯೋಜನೆ (Scheme for Promotion of Academic and Research Collaboration (SPARC) ) ಎಂಬ ಎರಡು ಯೋಜನೆಗಳನ್ನು ಹೊರ ತಂದಿದೆ.
ಈ ಎರಡು ಯೋಜನೆಗಳಿಗೆ ಸಂಬಂಧ ಪಟ್ಟ ವೆಬ್ ಪೋರ್ಟಲ್ಗಳನ್ನು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಗುರುವಾರ ಲೋಕಾರ್ಪಣೆಗೊಳಿಸಿದ್ದಾರೆ.
IMPRESS ಯೋಜನೆಯಡಿ 1,500 ಸಂಶೋಧನಾ ಪ್ರಾಜೆಕ್ಟ್ಗಳಿಗೆ ಎರಡು ವರ್ಷಗಳ ಅವಧಿಗೆ ನೆರವು ಸಿಗಲಿದೆ. ಈ ಯೋಜನೆ ದೇಶ, ಪ್ರಜಾಫ್ರಭುತ್ವ, ಮಾಧ್ಯಮ, ಸಂಸ್ಕೃತಿ, ಸಮಾಜ, ಸಾಮಾಜಿಕ ಮಾಧ್ಯಮ, ತಂತ್ರಜ್ಞಾನ ವಲಯಗಳನ್ನು ಒಳಗೊಳ್ಳಲಿದೆ.
SPARC ಯೋಜನೆಯಡಿ ಜಂಟಿ ಸಂಶೋಧನೆಗಳಿಗೆ ರೂ 418 ಕೋಟಿಗಳ ನೆರವು ಸಿಗಲಿದೆ. ಪ್ರತಿಭಾ ಪಲಾಯಣ ತಡೆಗಟ್ಟುವ ಸಲುವಾಗಿ ಈ ಯೋಜನೆಯನ್ನು ಹೊರತರಲಾಗಿದೆ.
ಈ ಎರಡೂ ಯೋಜನೆಯಡಿಯಲ್ಲಿನ ಸಂಶೋಧನಾ ಕಾರ್ಯಗಳು ಮುಂದಿನ ಜನವರಿಯಿಂದ ಆರಂಭಗೊಳ್ಳಲಿದೆ.
source: www.hindustantimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.