ಕಡಲ ನಗರಿ ಮಂಗಳೂರಿನಲ್ಲಿ ನವೆಂಬರ್ 3 ಮತ್ತು 4ರಂದು ‘ಐಡಿಯಾ ಆಫ್ ಭಾರತ್’ ಥೀಮ್ನೊಂದಿಗೆ ಜರುಗುತ್ತಿರುವ ಲಿಟರೇಚರ್ ಫೆಸ್ಟ್ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಇದುವರೆಗೆ ರಾಜ್ಯಗಳ ರಾಜಧಾನಿಗಳಲ್ಲಿ ಮಾತ್ರ ಫೆಸ್ಟ್ ಆಯೋಜನೆಗೊಳ್ಳುತ್ತಿತ್ತು, ಆದರೆ ಇದೇ ಮೊದಲ ಬಾರಿಗೆ ರಾಜಧಾನಿಯನ್ನು ಹೊರತುಪಡಿಸಿದ ನಗರವೊಂದರಲ್ಲಿ ಲಿಟರೇಚರ್ ಫೆಸ್ಟ್ ಆಯೋಜನೆಗೊಂಡಿದೆ. ಹಿಂದಿ ಮತ್ತು ಇಂಗ್ಲೀಷ್ ಎರಡು ಭಾಷೆಯನ್ನು ಹೊರತುಪಡಿಸಿ ಇತರ ಭಾಷೆಗಳಲ್ಲಿ ಫೆಸ್ಟ್ ಆಯೋಜನೆಗೊಂಡ ಉದಾಹರಣೆ ಇಲ್ಲ. ಆದರೆ ಮಂಗಳೂರಿನಲ್ಲಿ ಮಾತ್ರ ಇಂಗ್ಲೀಷ್, ಕನ್ನಡ, ಹಿಂದಿ, ತುಳು, ಕೊಂಕಣಿಯ ಪಂಚ ಭಾಷೆಗಳಲ್ಲಿ ಫೆಸ್ಟ್ ಆಯೋಜನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.
ಆಗಮಿಸುತ್ತಿರುವ ಖ್ಯಾತ ಬರಹಗಾರರ ಬಗೆಗಿನ ಒಂದಿಷ್ಟು ಮಾಹಿತಿಗಳು ಇಲ್ಲಿವೆ
ಡೇವಿಡ್ ಫ್ರಾಲಿ: ಅಮೆರಿಕನ್ ಪ್ರಜೆಯಾದ ಇವರು ಆಳವಾದ ವೇದಾಧ್ಯಯನ ಮಾಡಿದ್ದಾರೆ. ವೇದಾಚಾರ್ಯರಾಗಿ, ಆಯುರ್ವೇದ ಶಿಕ್ಷಕರಾಗಿ, ಬರಹಗಾರನಾಗಿ, ಜೋತಿಷ್ಯನಾಗಿ ಅಪಾರ ಕೀರ್ತಿ ಹೊಂದಿದ್ದಾರೆ. ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ವೇದಿಕ್ ಸ್ಟಡೀಸ್ನ ನಿರ್ದೇಶಕರಾಗಿದ್ದಾರೆ. ಪಂಡಿತ್ ವಾಮದೇವ ಶಾಸ್ತ್ರೀ ಎಂಬ ಹೆಸರೂ ಇವರಿಗಿದೆ. 1ಲಕ್ಷ 36 ಸಾವಿರ ಟ್ವಿಟರ್ ಫಾಲೋವರ್ಗಳಿದ್ದಾರೆ.
ಮೇಜರ್ ಗೌರವ್ ಆರ್ಯ: ಮಾಜಿ ಯೋಧ, ಬರಹಗಾರ, ರಕ್ಷಣಾ ಮತ್ತು ತಂತ್ರಗಾರಿಕ ವ್ಯವಹಾರಗಳಲ್ಲಿ ತಜ್ಞತೆ ಹೊಂದಿರುವ ಪತ್ರಕರ್ತ. ರಿಪಬ್ಲಿಕ್ ಟಿವಿಯಲ್ಲಿ ‘ಪ್ಯಾಟ್ರಿಯೋಟ್’ ಎಂಬ ಕಾರ್ಯಕ್ರಮವನ್ನು ಇವರು ನಿರೂಪಿಸುತ್ತಿದ್ದಾರೆ.
ರಾಜೀವ್ ಮಲ್ಹೋತ್ರ: ಇಂಡೋ ಅಮೆರಿಕನ್ ಲೇಖಕ, ಸಂಶೋಧಕ, ವಾಗ್ಮಿ. ಭಾರತೀಯ ಅಧ್ಯಯನವನ್ನು ಉತ್ತೇಜಿಸುವ ಇನ್ಫಿನಿಟಿ ಫೌಂಡೇಶನ್ನ ಸ್ಥಾಪಕ. ಭಾರತ ಮತ್ತು ಹಿಂದೂ ಧರ್ಮದ ಬಗೆಗಿನ ರಾಷ್ಟ್ರೀಯ ವಿಚಾರಧಾರೆಯನ್ನು ಇವರು ಪ್ರಚುರಪಡಿಸುತ್ತಿದ್ದಾರೆ.
ಶಿಫಾಲಿ ವೈದ್ಯ: ಪ್ರಖರ ರಾಷ್ಟ್ರೀಯ ವಿಚಾರಧಾರೆಗೆ ಹೆಸರಾದ ಇವರು, ಸ್ವರಾಜ್ಯ ಮತ್ತು ತರುಣ್ ಭಾರತ್ ಮ್ಯಾಗಜೀನ್ನ ಅಂಕಣಗಾರ್ತಿಯಾಗಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಇವರು, 2ಲಕ್ಷದ 78 ಸಾವಿರ ಟ್ವಿಟರ್ ಫಾಲೋವರ್ಗಳನ್ನು ಹೊಂದಿದ್ದಾರೆ.
ಡಾ.ಬಿಎಂ ಹೆಗ್ಡೆ: ಕರ್ನಾಟಕದ ಖ್ಯಾತ ಹೃದ್ರೋಗ ತಜ್ಞ, ವೈದ್ಯಕೀಯ ವಿಜ್ಞಾನಿ, ಶಿಕ್ಷಣ ತಜ್ಞ ಮತ್ತು ಲೇಖಕ. ಭಾರತೀಯ ವಿದ್ಯಾ ಭವನದ ಮುಖ್ಯಸ್ಥ. ವೈದ್ಯಕೀಯ ಶಾಸ್ತ್ರ ಮತ್ತು ವೃತ್ತಿ ಧರ್ಮದ ಬಗ್ಗೆ ಹಲವಾರು ಪುಸ್ತಕ ಬರೆದಿದ್ದಾರೆ. ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಅಪಾರ ನಂಬಿಕೆಯುಳ್ಳವರಾಗಿದ್ದಾರೆ.
ಮಧು ಪೂರ್ಣಿಮಾ ಕಿಶ್ವರ್: ಪ್ರಾಧ್ಯಾಪಕಿ, ಹೋರಾಟಗಾರ್ತಿ, ಲೇಖಕಿ. ಮಾನವ ಹಕ್ಕುಗಳ ಸಂಸ್ಥೆ ‘ಮಾನುಷಿ’ ಸ್ಥಾಪಕಿ. ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟಿಯ ಭಾರತೀಯ ಅಧ್ಯಯನ ಪ್ರಾಜೆಕ್ಟ್ಗಳ ನಿರ್ದೇಶಕಿ.
ಜೆ.ನಂದಕುಮಾರ್: ಪ್ರಜ್ಞಾ ಪ್ರವಾಹ್ನ ರಾಷ್ಟ್ರೀಯ ಸಂಚಾಲಕ. ಆರ್ಎಸ್ಎಸ್ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯ ಆಹ್ವಾನಿತ ಸದಸ್ಯ.
ವಿವೇಕ್ ಅಗ್ನಿಹೋತ್ರಿ: ಬಾಲಿವುಡ್ ಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ. ರಾಜಕೀಯ, ಕ್ರೀಡೆ, ಥ್ರಿಲ್ಲರ್ ಆಧಾರಿತ ಸಿನಿಮಾಗಳನ್ನು ಮಾಡುವುದಕ್ಕೆ ಹೆಚ್ಚು ಪ್ರಸಿದ್ಧರು. ಹೋರಾಟಗಾರ, ವಾಗ್ಮಿ ಮತ್ತು ಲೇಖಕರೂ ಹೌದು. ಪತ್ನಿ ಜೊತೆಗೂಡಿ ’ಐಆಮ್ ಬುದ್ಧ’ ಎಂಬ ಎನ್ಜಿಓವನ್ನು ನಡೆಸುತ್ತಿದ್ದಾರೆ.
ಆನಂದ್ ರಂಗನಾಥನ್: ಲೇಖಕ, ಸ್ವರಾಜ್ಯ ಮ್ಯಾಗಜೀನ್ನ ಕನ್ಸಲ್ಟಿಂಗ್ ಎಡಿಟರ್, ಅಂಕಣಗಾರ. ಹಲವು ಪುಸ್ತಕಗಳನ್ನು ಬರೆದಿದ್ದಾರೆ.
ರೋಹಿತ್ ಪದಕಿ: ಲೇಖಕ, ಕನ್ನಡ ಚಲನಚಿತ್ರ ನಿರ್ದೇಶಕ. 2017ರಲ್ಲಿ ದಯವಿಟ್ಟು ಗಮನಿಸಿ ಎಂಬ ಚಿತ್ರ ಇವರಿಗೆ ಖ್ಯಾತಿ ತಂದುಕೊಟ್ಟಿದೆ. ಜೆಸ್ಸಿ, ಆಟಗಾರ ಸಿನಿಮಾವನ್ನೂ ಮಾಡಿದ್ದಾರೆ. ಪ್ರವಾಸ ಮತ್ತು ಬರಹ ಇವರ ಮೆಚ್ಚಿನ ಹವ್ಯಾಸಗಳು.
ಶಾಂಭವಿ ಛೋಪ್ರಾ: ಆಧ್ಯಾತ್ಮ ಗುರು. ದೇವಿ ತಂತ್ರ, ಜೋತಿಷ್ಯ, ಆಯುರ್ವೇದ, ವೇದಾಂತ ಮುಂತಾದ ವೇದಿಕ ಪರಂಪರೆಯ ಮಾರ್ಗದರ್ಶಕಿಯಾಗಿದ್ದಾರೆ. ಇವರ ಬೋಧನೆಗಳು ಪ್ರಾಚೀನ ಅಧ್ಯಯನ, ಭಕ್ತಿ ಯೋಗ ಆಧಾರಿತವಾಗಿರುತ್ತದೆ. ಜ್ಯೋತಿಷ್ಯ ವಿಶಾರಧ ಪ್ರಶಸ್ತಿಯಿಂದ ಪುರಸ್ಕರಿಸಲ್ಪಟ್ಟಿದ್ದಾರೆ.
ಪ್ರಫುಲ್ಲಾ ಕೇಟ್ಕರ್: ಆರ್ಗನೈಝರ್ ಸಂಪಾದಕ. ಅತ್ಯುತ್ತಮ ಬರಹಗಾರ.
ಡಾ.ಸಂದೀಪ್ ಶಾಸ್ತ್ರೀ: ಜೈನ್ ಯೂನಿವರ್ಸಿಟಿಯ ಪ್ರೊ ವೈಸ್ ಚಾನ್ಸೆಲರ್. ಲೋಕನೀತಿ ನೆಟ್ವರ್ಕ್ನ ರಾಷ್ಟ್ರೀಯ ಸಂಯೋಜಕ. ಶಿಕ್ಷಕ, ವೃತ್ತಿಯಲ್ಲಿ ತರಬೇತುದಾರ, ಪ್ರವೃತ್ತಿಯಲ್ಲಿ ಸಂಶೋಧಕ.
ಅಭಿನವ್ ಪ್ರಕಾಶ್: ಅಂಕಣಗಾರ, ದೆಹಲಿ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್. ದಲಿತ ಚಿಂತಕ.
ಗೌತಮ್ ಚಿಕರ್ಮನೆ: ಅಬಸರ್ವರ್ ರಿಸರ್ಚ್ ಫೌಂಡೇಶನ್ನ ಉಪಾಧ್ಯಕ್ಷ. ಆರ್ಥಿಕತೆ ಮತ್ತು ಭಾರತದ ರಾಜಕಾರಣದ ಮೇಲೆ ಇವರ ಸಂಶೋಧನೆಗಳು ಕೇಂದ್ರಿತವಾಗಿರುತ್ತದೆ. ಕೇರ್ ಇಂಡಿಯಾದ ನಿರ್ದೇಶರೂ ಆಗಿದ್ದಾರೆ.
ಎಂ.ಆರ್ ವೆಂಕಟೇಶ್: ವಕೀಲ, ಅಂಕಣಗಾರ, ಟಿವಿ ಪ್ಯಾನಲಿಸ್ಟ್, ಆರ್ಥಿಕ ತಜ್ಞ.
ವಿವೇಕ್ ಮಲ್ಯ: ಒಎನ್ಜಿಸಿಯ ಸ್ವತಂತ್ರ ನಿರ್ದೇಶಕ. ಚಾರ್ಟೆಡ್ ಅಕೌಂಟೆಂಟ್. ಐಬಿಬಿಐ ಇಂಡಿಯಾದಲ್ಲಿ ಇನ್ಸಾಲ್ವೆನ್ಸಿ ರಿಸಲ್ಯೂಷನ್ ಫ್ರೊಫೆಶನಲ್ ಆಗಿದ್ದಾರೆ. ಅಂತಾರಾಷ್ಟ್ರೀಯ ತೆರಿಗೆ, ವಿದೇಶಿ ವಿನಿಮಯ ವಿಷಯಗಳಲ್ಲಿ ತಜ್ಞರಾಗಿದ್ದಾರೆ.
ಡಾ.ಅನಿರ್ಬನ್ ಗಂಗೂಲಿ: ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ರಿಸರ್ಚ್ ಫೌಂಡೇಶನ್ನ ನಿರ್ದೇಶಕರು. ಬಿಜೆಪಿಯ ಪಾಲಿಸಿ ರಿಸರ್ಚ್ ಡಿಪಾರ್ಟ್ಮೆಂಟ್ನ ಸದಸ್ಯ. ಬಿಜೆಪಿ ಲೈಬ್ರರಿ ಡಿಪಾರ್ಟ್ಮೆಂಟ್ನ ಸಂಚಾಲಕ.
ಚಕ್ರವರ್ತಿ ಸೂಲಿಬೆಲೆ: ಅಂಕಣಗಾರ, ಬರಹಗಾರ, ಯುವ ಬ್ರಿಗೇಡ್ನ ಮಾರ್ಗದರ್ಶಕ, ಚತುರ ವಾಗ್ಮಿ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಹತ್ತಾರು ಲೇಖನಗಳನ್ನು ಬರೆದಿದ್ದಾರೆ. ದೇಶಭಕ್ತಿಯನ್ನು ಸ್ಪುರಣಗೊಳಿಸುವ ಇವರ ಮಾತುಗಳು ಯುವಕರಿಗೆ ಪ್ರೇರಣಾಶೀಲ.
ಮಾಳವಿಕ ಅವಿನಾಶ್: ಚಲನಚಿತ್ರ ನಟಿ, ವಕೀಲೆ, ಬಿಜೆಪಿ ವಕ್ತಾರೆ, ಉತ್ತಮ ಮಾತುಗಾರ್ತಿಯೂ ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.
ವಿಶಾಲ್ ಹೆಗ್ಡೆ: ಕೈಗಾರಿಕ ತಜ್ಞ, ಶೈಕ್ಷಣಿಕ ಆಡಳಿತಗಾರ. ನಿಟ್ಟೆ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿ. ಲೆಮಿನ ಗ್ರೂಪ್ ಆಫ್ ಕಂಪನೀಸ್ನ ನಿರ್ದೇಶಕ.
ಡಾ.ಗುರುರಾಜ್ ಕರಜ್ಗಾಗಿ: ಅಂತಾರಾಷ್ಟ್ರೀಯ ಜರ್ನಲ್ಸ್ಗಳಲ್ಲಿ ಸುಮಾರು 22 ಸಂಶೋಧನಾ ಪೇಪರ್ಗಳನ್ನು ಮಂಡಿಸಿದ ಕೀರ್ತಿ ಇವರದ್ದು. ಪ್ರತಿಷ್ಠಿತ ಶೈಕ್ಷಣಿಕ ಮತ್ತು ಸರ್ಕಾರಿ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಂಕಣಗಾರ, ಕರುನಾಳು ಬಾ ಬೆಳಕೆ ಪುಸ್ತಕ ಸೇರಿದಂತೆ ಅನೇಕ ಪುಸ್ತಕ ಬರೆದಿದ್ದಾರೆ.
ಡಾ.ಕೆಪಿ ನಂದನ್ ಪ್ರಭು: ಮಣಿಪಾಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಅಸೋಸಿಯೇಟ್ ಪ್ರೊಫೆಸರ್, ಸಂಶೋಧಕ.
ಪ್ರಕಾಶ್ ಬೆಳವಾಡಿ: ರಂಗಕರ್ಮಿ, ಚಲನಚಿತ್ರ ನಟ, ಹೋರಾಟಗಾರ, ಚಿಂತಕ, ಪತ್ರಕರ್ತ. ಸುಚಿತ್ರ ಸ್ಕೂಲ್ ಆಫ್ ಸಿನಿಮಾ ಆಂಡ್ ಡ್ರಮಾಟಿಕ್ ಆರ್ಟ್ನ ಸ್ಥಾಪಕ.
ಸಂದೀಪ್ ಬಾಲಕೃಷ್ಣ: ಅಂಕಣಗಾರ, ಬರಹಗಾರ, ಸ್ವತಂತ್ರ ಚಿಂತಕ. ‘ಟಿಪ್ಪು ಸುಲ್ತಾಲ್; ಡಿ ಟೈರೆಂಟ್ ಆಫ್ ಮೈಸೂರ್’ ಪುಸ್ತಕ ಬರೆದಿದ್ದಾರೆ. ಎಸ್ಎಲ್ ಭೈರಪ್ಪನವರ ‘ಆವರಣ’ ಪುಸ್ತಕವನ್ನು ಇಂಗ್ಲೀಷ್ಗೆ ಅನುವಾದಿಸಿದ್ದಾರೆ.
ನಿತಿನ್ ಶ್ರೀಧರ್: ಇಂಡಿಯಾಫ್ಯಾಕ್ಟ್ಸ್ಆರ್ಗ್.ನ ಸಂಪಾದಕ, ಅದ್ವೈತ ಅಕಾಡಮಿ ಸಂಪಾದಕ. ಹಿಂದೂಯಿಸಂ, ವೇದಾಂತ ಮತ್ತು ಧರ್ಮದ ಬಗ್ಗೆ ಹೆಚ್ಚಿನ ಲೇಖನಗಳನ್ನು ಬರೆಯುತ್ತಾರೆ. ಉತ್ತಮ ವಾಗ್ಮಿ.
ರಿಷಬ್ ಶೆಟ್ಟಿ: ಕನ್ನಡ ಚಲನಚಿತ್ರ ನಿರ್ದೇಶಕ ಮತ್ತು ನಟ. ಯಕ್ಷಗಾನದಲ್ಲಿ ಪಾತ್ರ ಮಾಡಿದ ಅನುಭವವುಳ್ಳವರು. ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ ಎಂಬ ಸಾಮಾಜಿಕ ಕಳಕಳಿಯ ಸಿನಿಮಾ ಇವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆ.
ತೇಜಸ್ವಿ ಸೂರ್ಯ: ವಕೀಲ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ. ಸಾಮಾಜಿಕ ಸೇವೆಯಲ್ಲಿ ಸದಾ ಮುಂದು, 12ನೇ ವಯಸ್ಸಿಗೆ ‘ರಾಷ್ಟ್ರೀಯ ಬಾಲಶ್ರೀ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಎಬಿವಿಪಿಯ ಸಕ್ರಿಯ ಸದಸ್ಯರಾಗಿದ್ದರು. ‘ಅರೈಸ್ ಇಂಡಿಯಾ’ ಎಂಬ ಎನ್ಜಿಓ ಸ್ಥಾಪಿಸಿದ್ದಾರೆ.
ಮತ್ತಿಘಟ್ಟ ಚೈತ್ರ: ಆರೋಹಿ ರಿಸರ್ಚ್ ಫೌಂಡೇಶನ್ ಬೆಂಗಳೂರು, ಇದರ ನಿರ್ದೇಶಕ. ಅತ್ಯುತ್ತಮ ಸಂಶೋಧನ ಪಟು.
ರೋಹಿತ್ ಚಕ್ರತೀರ್ಥ: ಲೇಖಕ, ವಿಶ್ವವಾಣಿ ಪತ್ರಿಕೆಯಲ್ಲಿ ಅಂಕಣಗಾರ, ಶಿಕ್ಷಣ ಕ್ಷೇತ್ರದ ಕನ್ಸಲ್ಟೆಂಟ್, ಹಲವು ಪುಸ್ತಕಗಳನ್ನು ಬರೆದಿದ್ದಾರೆ.
ಸಹನಾ ವಿಜಯ್ಕುಮಾರ್: ರಾಷ್ಟ್ರೀಯವಾದಿ, ಲೇಖಕಿ, ಅಂಕಣಗಾರ್ತಿ. ಇವರ ಕಶೀರ ಪುಸ್ತಕ ಭಾರೀ ಜನಪ್ರಿಯತೆ ಗಳಿಸಿದೆ.
ಲಿಟರೇಚರ್ ಫೆಸ್ಟ್ನಲ್ಲಿ ಕವಿಗೋಷ್ಠಿಯೂ ಜರುಗಲಿದ್ದು, ಹಲವಾರು ಪ್ರಸಿದ್ಧ ಕವಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
ಖ್ಯಾತ ಕನ್ನಡ ಕವಿ ಹಾಗೂ ಬರಹಗಾರರಾದ ಬಿ.ಆರ್ ಲಕ್ಷ್ಮಣ್ ರಾವ್, ನಾಟಕ ಬರಹಗಾರ ಮತ್ತು ಅಂಕಣಗಾರ ಎಚ್.ದುಂಡೀರಾಜ್, ಪ್ರಸಿದ್ಧ ಕವಿ ಮತ್ತು ಮಂಗಳೂರು ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಧನಂಜಯ್ ಕುಂಬ್ಳೆ, ಕವಯತ್ರಿ ಹಾಗೂ ಲೇಖಕಿ ನಂದಿನಿ ವಿಶ್ವನಾಥ್ ಹೆದ್ದುರ್ಗ, ಉಡುಪಿಯ ಕನ್ನಡ ಕವಯತ್ರಿ ಪೂರ್ಣಿಮಾ ಸುರೇಶ್, ಪ್ರಸಿದ್ಧ ಕನ್ನಡ ಕವಿ, ವಿಶ್ಲೇಷಕ, ಶಿಕ್ಷಕ ಸುಬ್ರಾಯ ಚೊಕ್ಕಾಡಿ ಇವರಿಂದ ಕವಿಗೋಷ್ಠಿ ನಡೆಯಲಿದೆ.
ಲಿಟರೇಚರ್ ಫೆಸ್ಟ್ನ ಪೋಷಕರ ಬಗೆಗಿನ ಒಂದಿಷ್ಟು ಮಾಹಿತಿಗಳು ಇಲ್ಲಿವೆ
ಎನ್. ವಿನಯ್ ಹೆಗ್ಡೆ: ನಿಟ್ಟೆ ಯೂನಿವರ್ಸಿಟಿಯ ಕುಲಪತಿಗಳು ಮತ್ತು ಲೆಮಿನಾ ಗ್ರೂಪ್ ಆಫ್ ಕಂಪನೀಸ್ನ ಮುಖ್ಯಸ್ಥರಾಗಿದ್ದಾರೆ. ದಕ್ಷಿಣ ಕನ್ನಡದ ಅತೀದೊಡ್ಡ ಶೈಕ್ಷಣಿಕ ಸಂಸ್ಥೆ ’ನಿಟ್ಟಿ ಎಜುಕೇಶನ್ ಟ್ರಸ್ಟ್’ನ ಸ್ಥಾಪಕರಾಗಿದ್ದಾರೆ. ಇದರಡಿ 22 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ರಾಜೀವ್ ಚಂದ್ರಶೇಖರ್: ರಾಜ್ಯಸಭಾ ಸಂಸದ, ಜುಪಿಟರ್ ಕ್ಯಾಪಿಟಲ್ ಫ್ರೈ.ಲಿನ ಸಂಸ್ಥಾಪಕ, ಸಿಲಿಕಾನ್ ವ್ಯಾಲಿಯಲ್ಲಿ ತಂತ್ರಾಂಶ ಮತ್ತು ಮೈಕ್ರೋಪ್ರೊಸೆಸರ್ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಿ ಇಂಟೆಲ್ ಕಂಪನಿಯಲ್ಲಿ ಕಾರ್ಯನಿರ್ವಹಿಸಿದರು. ಐತಿಹಾಸಿಕ 80486 ಪ್ರೊಸೆಸರ್ ಮತ್ತು ಪೇಟಿಎಂ ನಿರ್ಮಿಸಿದ ತಂಡದ ಭಾಗವಾಗಿದ್ದಾರೆ.
ಸಂಧ್ಯಾ ಎಸ್ ಪೈ: ತುಷಾರ, ತರಂಗ ಮತ್ತು ತುಂತುರು ಮ್ಯಾಗಜೀನ್ಗಳ ವ್ಯವಸ್ಥಾಪಕ ಸಂಪಾದಕಿಯಾಗಿದ್ದಾರೆ. ಕಳೆದ ಕೆಲ ದಶಕಗಳಿಂದ ಕನ್ನಡ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಮಹತ್ವದ ಛಾಪು ಮೂಡಿಸಿದ್ದಾರೆ. ಮೂರು ಕನ್ನಡ ಮ್ಯಾಗಜೀನ್ಗಳಿಗೆ ಸಂಪಾದಕಿಯಾಗಿರುವ ಕರ್ನಾಟಕದ ಏಕೈಕ ಮಹಿಳೆಯಾಗಿದ್ದಾರೆ.
ಸಾಹಿತ್ಯ ಹಬ್ಬವಷ್ಟೇ ಅಲ್ಲದೆ, ಇಲ್ಲಿ ಶರವಣನ್ ಜಿಎನ್ ಅವರಿಂದ ಫೋಟೋಗ್ರಾಫಿ ತರಬೇತಿ, ಗೋಕರ್ಣದ ರವಿ ಗುಣಗ ಅವರಿಂದ ಮಣ್ಣಿನ ಕಲಾಕೃತಿಗಳ ತಯಾರಿಕೆ ತರಬೇತಿ ಕಾರ್ಯಕ್ರಮ ಜರುಗಲಿದೆ. ಸಾಹಿತ್ಯ ಮಾರಾಟ ಮಳಿಗೆಗಳು ಇರಲಿವೆ.
ಹೆಚ್ಚಿನ ಮಾಹಿತಿಗಾಗಿ ಲಿಂಕ್ ನೋಡಿ : http://mlrlitfest.org/category/speakers
ಮಂಗಳೂರು ಲಿಟ್ ಪೆಸ್ಟ್ ಹಲವಾರು ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಸಾಹಿತ್ಯಾಭಿಮಾನಿಗಳನ್ನು ಎದುರು ನೊಡುತ್ತಿದೆ, ಸಾಹಿತ್ಯ ಪ್ರಿಯರೂ ಈ ಬಗ್ಗೆ ಹೆಚ್ಚಿನ ಕುತೂಹಲಿಗಳಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.