ಕಠ್ಮಂಡು: ಇತ್ತೀಚಿಗಷ್ಟೇ ಭೀಕರ ಭೂಕಂಪಕ್ಕೆ ಸಾಕ್ಷಿಯಾದ ನೇಪಾಳದ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಭೂಕಂಪದಿಂದಾಗಿ ಅಲ್ಲಿನ ಒಂದು ಮಿಲಿಯನ್ ಜನರು ದಟ್ಟ ದಾರಿದ್ರ್ಯಕ್ಕೆ ಒಳಗಾಗಿದ್ದಾರೆ. ವಸತಿ, ಆಹಾರ, ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ.
ಪಿಡಿಎನ್ಎ(Post-Disaster Needs Assessment) ನೀಡಿದ ವರದಿಯ ಪ್ರಕಾರ ಭೂಕಂಪದಿಂದಾಗಿ ಒಂದು ಮಿಲಿಯನ್ ನೇಪಾಳಿಗರು ಬಡತನ ರೇಖೆಗಿಂತ ಕೆಳಗಿನ ಮಟ್ಟಕ್ಕೆ ಇಳಿದಿದ್ದಾರೆ. ಇದರಿಂದಾಗಿ ನೇಪಾಳದ ಬಡತನದ ಮಟ್ಟ 2.5-3.5ಕ್ಕಿಂತಲೂ ಹೆಚ್ಚಿನ ಏರಿಕೆ ಕಾಣಲಿದೆ. 2014ರ Human Development Report ಪ್ರಕಾರ ನೇಪಾಳದಲ್ಲಿ ಶೇ.23.8ರಷ್ಟು ಬಡತನ ಸಂಖ್ಯೆ ಇತ್ತು.
ಎಪ್ರಿಲ್ 25ರಂದು ನೇಪಾಳದಲ್ಲಿ 7.9ತೀವ್ರತೆಯ ಭೂಕಂಪ ಸಂಭವಿಸಿತ್ತು, ಇದರಿಂದ ನೇಪಾಳದ 75 ಜಿಲ್ಲೆಗಳ ಪೈಕಿ 36 ಜಿಲ್ಲೆಗಳು ತೀವ್ರ ಹಾನಿಗೊಳಗಾದವು. 8,8೦೦ ಜನರು ಮೃತರಾದರು, ಸಾವಿರಕ್ಕೂ ಅಧಿಕ ಮಂದಿ ಗಾಯಾಳುಗಳಾದರು. ಒಂದು ಮಿಲಿಯನ್ ನಾಗರಿಕರು ಮನೆ ಮಠ ಕಳೆದುಕೊಂಡರು.
ಇದೀಗ ಒಂದು ಮಿಲಿಯನ್ ಜನರು ಭೂಕಂಪದ ಕಾರಣದಿಂದಾಗಿಯೇ ಬಡತನ ರೇಖೆಗಿಂತಲೂ ಕೆಳಗಿಳಿದಿದ್ದಾರೆ. ಭೂಕಂಪ ನೀಡಿದ ಹೊಡೆತದಿಂದ ಚೇತರಿಸಿಕೊಳ್ಳಲು ಇವರಿಗೆ ಇನ್ನೂ ಹಲವಾರು ವರ್ಷಗಳೇ ಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.