ಯುಎಸ್ನಲ್ಲಿ ಅತೀ ವೇಗದಲ್ಲಿ ಬೆಳೆಯುತ್ತಿರುವ ಭಾಷೆಯಾಗಿ ತೆಲುಗು ಹೊರಹೊಮ್ಮಿದೆ. 2010-17ರ ನಡುವೆ ಅಲ್ಲಿನ ತೆಲುಗು ಭಾಷಿಕರ ಸಂಖ್ಯೆ ಶೇ.86ರಷ್ಟು ಏರಿಕೆಯಾಗಿದೆ.
ವಾಷಿಂಗ್ಟನ್: ಪ್ರಮುಖ ಭಾಷೆಯಾಗಿ ಇಂಗ್ಲೀಷ್ ರಾರಾಜಿಸುತ್ತಿರುವ ಅಮೆರಿಕಾದಲ್ಲಿ ಭಾರತೀಯ ಭಾಷೆಯೊಂದು ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ. ತೆಲುಗು ಯುಎಸ್ನ ಅತೀ ವೇಗದಲ್ಲಿ ಬೆಳೆಯುತ್ತಿರುವ ಭಾಷೆಯಾಗಿ ಹೊರಹೊಮ್ಮಿದೆ.
2010 ಮತ್ತು 2017ರ ನಡುವೆ ಅಮೆರಿಕಾದಲ್ಲಿ ತೆಲುಗು ಮಾತನಾಡುವವರ ಸಂಖ್ಯೆ ಶೇ.86ರಷ್ಟು ಏರಿಕೆಯಾಗಿದೆ. ಪ್ರಸ್ತುತ ಸುಮಾರು 4 ಲಕ್ಷ ಮಂದಿ ತೆಲುಗು ಮಾತನಾಡುತ್ತಿದ್ದಾರೆ ಎಂದು ಅಮೆರಿಕಾದ ಥಿಂಕ್ ಟ್ಯಾಂಕ್ ಹೇಳಿದೆ.
ಭಾರತದಲ್ಲಿ ನಾಲ್ಕನೇ ಅತೀದೊಡ್ಡ ಭಾಷೆಯಾಗಿರುವ ತೆಲುಗು, ಅಮೆರಿಕಾದಲ್ಲೂ ವೇಗದಲ್ಲಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ತೆಲುಗು ಭಾಷಿಕರ ವಲಸೆ ಹೆಚ್ಚಾಗುತ್ತಿರುವುದು ಕೂಡ ಇದಕ್ಕೆ ಕಾರಣವಾಗಿದೆ.
ಆದರೆ ಅಮೆರಿಕಾದಲ್ಲಿ ಇಂಗ್ಲೀಷ್ ಹೊರತುಪಡಿಸಿ ಮಾತನಾಡುವ ಇತರ ಭಾಷೆಗಳ ಪೈಕಿ ತೆಲುಗು 20ನೇ ಸ್ಥಾನದಲ್ಲಿದೆ. ಅತೀ ವೇಗದಲ್ಲಿ ಬೆಳೆಯುತ್ತಿರುವ ಟಾಪ್ 10 ಭಾಷೆಗಳ ಪೈಕಿ 7 ಭಾಷೆಗಳು ಸೌತ್ ಏಷ್ಯಾದ್ದೇ ಆಗಿದೆ.
Source; Zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.