ಜಾರ್ಜಿಯಾ: ಕ್ರೂರ ಮೃಗಗಳಾದ ಸಿಂಹ, ಹುಲಿ, ಕರಡಿ, ತೋಳ, ಘೆಂಡಾಮೃಗಗಳು ರಸ್ತೆಯಲ್ಲಿ ಅಡ್ಡಾಡುತ್ತಿರುವ, ಮನೆಯೊಳಗೆ ನುಗ್ಗಲು ಪ್ರಯತ್ನಿಸುತ್ತಿರುವ ದೃಶ್ಯಗಳು ಯೂರೋಪಿಯನ್ ದೇಶವಾದ ಜಾರ್ಜಿಯಾದ ರಾಜಧಾನಿಯಲ್ಲಿ ಭಾನುವಾರದಿಂದ ಕಂಡು ಬರುತ್ತಿದೆ.
ಭೀಕರವಾಗಿ ಸಂಭವಿಸಿದ ಪ್ರವಾಹದಿಂದಾಗಿ ಅಲ್ಲಿನ ಮೃಗಾಲಯವೊಂದು ಕೊಚ್ಚಿ ಹೋದ ಪರಿಣಾಮ ಪ್ರಾಣಿಗಳ ಪರಿಸ್ಥಿತಿ ಅತಂತ್ರವಾಗಿ ಬೀದಿಗೆ ಬಿದ್ದಿದೆ. ಕೆಲ ಪ್ರಾಣಿಗಳು ಜೀವ ಕಳೆದುಕೊಂಡಿವೆ. ಅಲ್ಲಿನ ಜನರಿಗೆ ಪ್ರವಾಹದ ಭಯ ಒಂದು ಕಡೆಯಾದರೆ, ಪ್ರಾಣಿಗಳ ಭಯ ಮತ್ತೊಂದೆಡೆ ಕಾಡುತ್ತಿದೆ.
ಕೆಲ ಪ್ರಾಣಿಗಳನ್ನು ಅಧಿಕಾರಿಗಳು ಗುಂಡಿಟ್ಟು ಕೊಂದಿದ್ದಾರೆ, ಕೆಲವು ಪ್ರಾಣಿಗಳಿಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಹಸಿವು ಮತ್ತು ಭಯದಿಂದ ಪ್ರಾಣಿಗಳು ದಾಳಿ ನಡೆಸುವ ಅಪಾಯವಿರುವುದರಿಂದ ಜನರಿಗೆ ರಸ್ತೆಗಿಳಿಯದಂತೆ ಸೂಚನೆ ನೀಡಲಾಗಿದೆ.
ಪ್ರವಾಹ ಮತ್ತು ಪ್ರಾಣಿಗಳ ದಾಳಿಯಿಂದ ಜಾರ್ಜಿಯಾದಲ್ಲಿ ಈಗಾಗಲೇ 12 ಮಂದಿ ಮೃತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ 20 ತೋಳಗಳನ್ನು, 8 ಸಿಂಹಗಳನ್ನು, ಹಲವು ನರಿ, ಜಾಗ್ವರ್ಗಳನ್ನು ಗುಂಡಿಟ್ಟು ಕೊಲ್ಲಲಾಗಿದೆ.
ಒಟ್ಟಿನಲ್ಲಿ ಪ್ರವಾಹದಿಂದಾಗಿ ಮೃಗಾಲಯದ ಪ್ರಾಣಿಗಳು ಬೀದಿಗೆ ಬಿದ್ದರೆ, ಅಲ್ಲಿನ ಜನರು ಪ್ರಾಣಿಗಳ ಭಯಕ್ಕೆ ತತ್ತರಿಸಿ ಹೋಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.