ಮುಂಬಯಿ: ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದ ಎರಡು ಪ್ರಮುಖ ಕೇಬಲ್ ಟಿವಿ ಮತ್ತು ಬ್ರಾಡ್ಬ್ಯಾಂಡ್ ಕಂಪನಿಗಳಾದ – ಹಾಥ್ವೇ ಕೇಬಲ್ ಮತ್ತು ಡೆನ್ ನೆಟ್ವರ್ಕ್ಸ್ನ ಬಹುಪಾಲು ಷೇರುಗಳನ್ನು ಖರೀದಿಸಿದೆ.
ಬರೋಬ್ಬರಿ ರೂ.5,230 ಕೋಟಿಗೆ ಎರಡು ಕಂಪನಿಗಳ ಷೇರುಗಳನ್ನು ರಿಲಾಯನ್ಸ್ ಖರೀದಿ ಮಾಡಿದೆ.
ಹಾಥ್ವೇಯಲ್ಲಿನ ಶೇ51.3ರಷ್ಟು ಷೇರುಗಳನ್ನು ರೂ.2,940ಕೋಟಿಗಳಿಗೆ ಮತ್ತು ಡೆನ್ನ ಶೇ.66ರಷ್ಟು ಷೇರುಗಳನ್ನು 2,045 ನೀಡಿ ಖರೀದಿ ಮಾಡುವುದಾಗಿ ರಿಲಾಯನ್ಸ್ ಹೇಳಿದೆ.
ರಿಲಾಯನ್ಸ್ನ ಈ ಕಾರ್ಯ ಮುಕೇಶ್ ಅಂಬಾನಿಯವರ ಜಿಯೋಗಿಗಾಫೈಬರ್ ಕನಸಿಗೆ ಹೆಚ್ಚಿನ ಉತ್ತೇಜನ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ.
ದೇಶದ 1,100 ನಗರಗಳ 10 ಮಿಲಿಯನ್ ಮನೆಗಳನ್ನು ಸಂಪರ್ಕಿಸುವುದು ಈ ಯೋಜನೆಯ ಮಹತ್ವಾಕಾಂಕ್ಷೆಯಾಗಿದೆ.
source; Economic times
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.