ನವದೆಹಲಿ: ದುಷ್ಟತನದ ವಿರುದ್ಧ ಒಳ್ಳೆಯತನದ ವಿಜಯವಾಗಿ ದಸರಾವನ್ನು ಆಚರಿಸಲಾಗುತ್ತದೆ. ಪ್ರಕೃತಿ, ಶಕ್ತಿಗಳ ಸಂಗಮವಾದ ದೇವಿಯನ್ನು ನಾನಾ ಅವತಾರಗಳಲ್ಲಿ ಪೂಜಿಸಿ ಭಕ್ತರು ಪುನೀತರಾಗುತ್ತಾರೆ. ಅಖಿಲ ಭಾರತ ಅಗರ್ಬತ್ತಿ ತಯಾರಕರ ಅಸೋಸಿಯೇಶನ್ (AIAMA) ಕೂಡ ದೇವಿಗೆ ವಿಭಿನ್ನವಾದ ಕಾಣಿಕೆಯನ್ನು ಅರ್ಪಿಸಿ ತನ್ನ ಭಕ್ತಿಯನ್ನು ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ದುರ್ಗಾ ಪೂಜೆ ಆಯೋಜನೆಗೊಳಿಸುವ ಬಂಗಾಳಿ ಅಸೋಸಿಯೇಶನ್ಗೆ 15 ಅಡಿ ಎತ್ತರದ ಅಗರ್ಬತ್ತಿಯನ್ನು ಅಗರ್ಬತ್ತಿ ತಯಾರಕರ ಅಸೋಸಿಯೇಶನ್ ನೀಡಿದೆ.
ಬಂಗಾಳಿ ಅಸೋಸಿಯೇಶನ್ 1949ರಿಂದ ಬೆಂಗಳೂರಿನಲ್ಲಿ ದುರ್ಗಾಪೂಜೆಯನ್ನು ಆಯೋಜನೆಗೊಳಿಸುತ್ತಾ ಬರುತ್ತಿದ್ದು, ಇದು ನಗರದ ಅತೀ ಹಳೆಯ ಮತ್ತು ಅತೀದೊಡ್ಡ ದುರ್ಗಾ ಪೂಜಾ ಸಮಾರಂಭ ಎಂಬ ಖ್ಯಾತಿ ಗಳಿಸಿದೆ.
ಈ 15 ಅಡಿ ಎತ್ತರದ ಅಗರ್ಬತ್ತಿ ದುರ್ಗಾಪೂಜೆಯ 5 ದಿನಗಳ ಕಾಲ ಉರಿಯಲಿದೆ.
source; ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.