ಲಕ್ನೋ: ನಟೋರಿಯಸ್ ಕ್ರಿಮಿನಲ್ಗಳ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ, ಪಿಸ್ತೂಲ್ ಕೈಕೊಟ್ಟ ಪರಿಣಾಮ ಬೇರೆ ದಾರಿ ಕಾಣದೆ ಕ್ರಿಮಿನಲ್ಗಳನ್ನು ಹೆದರಿಸಲು ‘ತೈನ್ ತೈನ್’ ಎಂದು ಬೊಬ್ಬಿಟ್ಟ ಸಬ್ ಇನ್ಸ್ಪೆಕ್ಟರ್ನ್ನು ಪ್ರಶಸ್ತಿಗೆ ನಾಮನಿರ್ದೇಶನಗೊಳಿಸಲಾಗಿದೆ.
ಎಸ್ಪಿ ಯಮುನಾ ಪ್ರಸಾದ್ ಅವರು ಸಬ್ ಇನ್ಸ್ಪೆಕ್ಟರ್ ಮನೋಜ್ ಕುಮಾರ್ ಅವರಿಗೆ ಪ್ರಶಸ್ತಿ ನೀಡುವಂತೆ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ಗೆ ಪತ್ರ ಬರೆದಿದ್ದಾರೆ.
ಕಳೆದ ವಾರ ಸಂಬಲ್ನಲ್ಲಿ ಈ ಘಟನೆ ನಡೆದಿದ್ದು, ಕಾಡಿನಲ್ಲಿ ಅವಿತಿದ್ದ ಕ್ರಿಮಿನಲ್ಗಳ ವಿರುದ್ಧ ಎನ್ಕೌಂಟರ್ ಆರಂಭಿಸಲಾಗಿತ್ತು, ಆದರೆ ಕಾರ್ಯಾಚರಣೆಯ ಗುಂಪಿನಲ್ಲಿದ್ದ ಒರ್ವ ಪೊಲೀಸ್ ಪೇದೆಯ ಪಿಸ್ತೂಲ್ ಜಾಮ್ ಆಗಿತ್ತು. ಈ ಪರಿಸ್ಥಿತಿಯ ಲಾಭವನ್ನು ಕ್ರಿಮಿನಲ್ಗಳ ಪಡೆಯಲು ಹೊಂಚು ಹಾಕುವ ಸಾಧ್ಯತೆ ಇದ್ದ ಕಾರಣ ತಕ್ಷಣ ಕಾರ್ಯಪ್ರವೃತ್ತರಾದ ಮನೋಜ್ ಕುಮಾರ್ ಪಿಸ್ತೂಲ್ನಿಂದ ಗುಂಡು ಹೊರಡುವ ಸಂದರ್ಭದಲ್ಲಿ ಕೇಳಿ ಬರುವ ರೀತಿ ’ತೈನ್ ತೈನ್’ ಎಂದು ಸದ್ದು ಮಾಡಿದ್ದಾರೆ. ಮಾತ್ರವಲ್ಲ ‘ಮಾರೋ, ಘೆರೋ ಎಂದು ಬೊಬ್ಬೆ ಹಾಕಿ ಇತರ ಪೊಲೀಸರನ್ನೂ ಬೊಬ್ಬೆ ಹಾಕಿಸಿದ್ದಾರೆ. ಈ ಎಲ್ಲಾ ದೃಶ್ಯಾವಳಿಗಳು ವೀಡಿಯೋದಲ್ಲಿ ಸೆರೆಯಾಗಿದೆ.
ಈ ರೀತಿಯಾಗಿ ಬೊಬ್ಬೆ ಹೊಡೆದ ಕಾರಣ ಕ್ರಿಮಿನಲ್ಗಳ ಮಾನಸಿಕ ದೃಢತೆ ಕುಸಿಯುತ್ತದೆ ಮತ್ತು ಅವರು ಭಯಭೀತರಾಗಿ ಮರು ದಾಳಿಯನ್ನು ನಡೆಸಲಾರರು ಎಂಬುದು ಮನೋಜ್ ಅವರ ಊಹೆಯಾಗಿತ್ತು, ಆ ಊಹೆ ಬಳಿಕ ನಿಜವಾಗಿದೆ.
source; Zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.