ವಿಶ್ವದ ಮೊತ್ತ ಮೊದಲ ಸಂಪೂರ್ಣ ಸಾವಯವ ಕೃಷಿ ರಾಜ್ಯವಾಗಿ ಹೊರಹೊಮ್ಮಿರುವ ಸಿಕ್ಕಿಂಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಗಳ ಫ್ಯೂಚರ್ ಪಾಲಿಸಿ ಫಾರ್ ಗೋಲ್ಡ್ ಅವಾರ್ಡ್ ಲಭಿಸಿದೆ.
ನವದೆಹಲಿ: ಭಾರತದ ಸುಂದರ ರಾಜ್ಯ ಸಿಕ್ಕಿಂ ಈಗ ಇಡೀ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿದೆ. ವಿಶ್ವದ ಮೊಟ್ಟ ಮೊದಲ ಸಂಪೂರ್ಣ ಸಾವಯವ ಕೃಷಿ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿಕ್ಕಿಂಗೆ ವಿಶ್ವಸಂಸ್ಥೆಯೇ ಪ್ರಶಸ್ತಿ ನೀಡಿ ಗೌರವಿಸಿದೆ.
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಗಳ ಫ್ಯೂಚರ್ ಪಾಲಿಸಿ ಫಾರ್ ಗೋಲ್ಡ್ ಅವಾರ್ಡ್ ಸಿಕ್ಕಿಂ ರಾಜ್ಯಕ್ಕೆ ದೊರೆತಿದೆ.
ಕೃಷಿ ವಿಜ್ಞಾನ ಮತ್ತು ಸುಸ್ಥಿರ ಆಹಾರ ವ್ಯವಸ್ಥೆಯ ಮೇಲಿನ ನಿಯಮಗಳಿಗಾಗಿ ಸಿಕ್ಕಿಂ ಈ ಪ್ರಶಸ್ತಿಗೆ ಬಾಜನವಾಗಿದೆ. ಇಲ್ಲಿನ ಸಿಎಂ ಅ.15ರಂದು ರೋಮ್ನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
25 ದೇಶಗಳ 51 ನಾಮನಿರ್ದೇಶನಗಳನ್ನು ಹಿಂದಿಕ್ಕಿ ಸಿಕ್ಕಿಂ ಗೋಲ್ಡ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಬ್ರೆಝಿಲ್, ಡೆನ್ಮಾರ್ಕ್, ಇಕ್ವೆಡರ್ ಬೆಳ್ಳಿ ಗೆದ್ದಿದೆ.
ಹಿಮಾಲಯದಲ್ಲಿನ ಪುಟ್ಟ ರಾಜ್ಯವಾದ ಸಿಕ್ಕಿಂನ್ನು 2016ರಲ್ಲಿ ಸಂಪೂರ್ಣ ಸಾವಯವ ರಾಜ್ಯ ಎಂದು ಘೋಷಿಸಲಾಗಿದೆ. ಅಲ್ಲಿ ಕೃಷಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡಲಾಗುತ್ತಿಲ್ಲ.
source: All India Radio
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.