ನವದೆಹಲಿ: ಎಎಪಿಯ ಬಂಡಾಯ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರ ನೇತೃತ್ವದಲ್ಲಿ ಸ್ವರಾಜ್ ಅಭಿಯಾನ ಸಂಘಟನೆ ರೈತ ಚಳುವಳಿಗೆ ಶನಿವಾರ ಚಾಲನೆ ನೀಡಿದೆ.
ಈ ಚಳುವಳಿಗೆ ಜೈ ಕಿಸಾನ್ ಎಂದು ಹೆಸರಿಡಲಾಗಿದ್ದು, ದೇಶದ ಭವಿಷ್ಯವನ್ನು ಪುನರ್ ರೂಪಿಸುವ ಸಲುವಾಗಿ ಇದನ್ನು ಆರಂಭಿಸಲಾಗಿದೆ ಎಂದು ಯಾದವ್ ಹೇಳಿದ್ದಾರೆ. ಅಲ ರೈತರ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುವಂತೆ ದೇಶದ ಜನರಿಗೆ ಕರೆ ನೀಡಿದ್ದಾರೆ.
ಈ ಚಳುವಳಿಯ ಅನ್ವಯ ಒಂದು ಲಕ್ಷ ಹಳ್ಳಿಗಳಿಗೆ ತೆರಳಿ ಸ್ವಯಂ ಸೇವಕರು ಸಭೆಗಳನ್ನು ನಡೆಸಲಿದ್ದಾರೆ, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಭೂಸ್ವಾಧೀನ ಮಸೂದೆ ವಿರುದ್ಧವೂ ಹೋರಾಟ ನಡೆಸಲಾಗುತ್ತದೆ.
ಎಎಪಿಯಿಂದ ವಜಾಗೊಂಡಿರುವ ಯಾದವ್ ಮತ್ತು ಭೂಷಣ್ ತಮ್ಮದೇ ಆದ ಸ್ವರಾಜ್ ಅಭಿಯಾನ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.