ವಾಷಿಂಗ್ಟನ್: ಅಮೆರಿಕಾದಲ್ಲಿ ಹಿಂದಿ ಮತ್ತು ಸಂಸ್ಕೃತವನ್ನು ಪ್ರಚಾರ ಮಾಡುವ ಉದ್ದೇಶದೊಂದಿಗೆ, ಅಲ್ಲಿರುವ ಭಾರತೀಯ ರಾಯಭಾರ ಕಛೇರಿ ಈ ಭಾಷೆಗಳ ತರಬೇತಿ ಕ್ಲಾಸ್ಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.
ವಾರದಲ್ಲಿ ಒಂದು ದಿನ ಈ ಕ್ಲಾಸ್ಗಳನ್ನು ನಡೆಸಲು ನಿರ್ಧರಿಸಲಾಗಿದ್ದು, ಭಾರತೀಯ ರಾಯಭಾರ ಕಛೇರಿಯಲ್ಲಿ ಭಾರತೀಯ ಸಂಸ್ಕೃತಿ ಶಿಕ್ಷಕರಾಗಿರುವ ಡಾ.ಮಾಕ್ಸ್ ರಾಜ್ ಅವರು ತರಗತಿ ನಡೆಸಲಿದ್ದಾರೆ.
ಹಿಂದಿ ಕ್ಲಾಸ್ ಮಂಗಳವಾರ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ, ಸಂಸ್ಕೃತ ಕ್ಲಾಸ್ ಗುರುವಾರ ಸಂಜೆ 6-7 ಗಂಟೆಯವರೆಗೆ ಜರುಗಲಿದೆ. ರಾಯಭಾರ ಕಛೇರಿ ಆವರಣದಲ್ಲೇ ತರಗತಿ ನಡೆಯಲಿದೆ.
ಕ್ಲಾಸ್ಗಳು ಯಾವಾಗ ಆರಂಭಗೊಳ್ಳಲಿದೆ ಎಂಬ ಬಗ್ಗೆ ಅಂತಿಮ ಘೋಷಣೆಯಾಗಿಲ್ಲ.
source; ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.