ನವದೆಹಲಿ: ರಫೆಲ್ ಒಪ್ಪಂದದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾಡುತ್ತಿರುವ ಕೊನೆಯಿಲ್ಲದ ಆರೋಪಗಳನ್ನು ಡಸಾಲ್ಟ್ ಆವಿಯೇಶನ್ ಸಾರಾಸಗಟಾಗಿ ಅಲ್ಲಗೆಳೆದಿದೆ.
‘ಡಸಾಲ್ಟ್ ರಿಲಾಯನ್ಸ್ ಏರೋಸ್ಪೇಸ್ ಲಿಮಿಟೆಡ್ ಮೂಲಕ ಡಸಾಲ್ಟ್ ಆವಿಯೇಶನ್ ಸಂಸ್ಥೆ ಭಾರತದಲ್ಲಿ ದೀರ್ಘಾವಧಿಯ ಉಪಸ್ಥಿತಿಯನ್ನು ಸ್ಥಾಪಿಸಲು ಬಯಸಿದೆ. ಭಾರತೀಯ ಸಿಇಓ ಮತ್ತು ಫ್ರೆಂಚ್ ಸಿಓಓ ಇದರ ನೇತೃತ್ವ ವಹಿಸಲಿದ್ದಾರೆ. ಫಾಲ್ಕೋನ್ ಮತ್ತು ರಫೆಲ್ ಏರ್ಕ್ರಾಫ್ಟ್ನ ಬಿಡಿಭಾಗಗಳನ್ನು ತಯಾರಿಸುವ ಘಟಕದ ತಾಂತ್ರಿಕ ಮತ್ತು ಕೈಗಾರಿಕಾ ನಿಯಂತ್ರಣವನ್ನು ಡಸಾಲ್ಟ್ ನಿಯಂತ್ರಿಸಲಿದೆ’ ಎಂದು ಡಸಾಲ್ಟ್ ಕಂಪನಿ ಸಿಇಓ ಹೇಳಿದ್ದಾರೆ.
ರಿಲಾಯನ್ಸ್ ಒಪ್ಪಂದದಿಂದಾಗಿ 30 ಸಾವಿರ ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗಳನ್ನು ಅಲ್ಲಗೆಳೆದಿರುವ ಅವರು, ಒಪ್ಪಂದದ ಒಟ್ಟು ಆಫ್ಸೆಟ್ ಬಾಧ್ಯತೆ ರೂ.29 ಸಾವಿರ ಕೋಟಿಯಾಗಿದೆ. ಇದನ್ನು ಕೇವಲ ಡಸಾಲ್ಟ್ ಮಾತ್ರ ಪೂರೈಸುತ್ತಿಲ್ಲ. ಬದಲಾಗಿ ನಾಲ್ಕು ಕಂಪನಿಗಳು ಇದರಲ್ಲಿ ಭಾಗಿಯಾಗಿವೆ. ಡಸಾಲ್ಟ್ ಹೊರತುಪಡಿಸಿ ಥೇಲ್ಸ್, ಸ್ಯಾಪ್ರನ್, ಎಂಬಿಡಿಎ ಇವುಗಳಲ್ಲವೂ ಆಫ್ಸೆಟ್ ಬಾಧ್ಯತೆ ಹೊಂದಿವೆ. ರಫೆಲ್ ರೂ.8,400 ಕೋಟಿ ಆಫ್ಸೆಟ್ ಬಾಧ್ಯತೆ ಹೊಂದಿದೆ. ಅಂದರೆ ಡಿಆರ್ಎಎಲ್ನ ಷೇರು ರೂ.840 ಕೋಟಿಯಾಗಿದೆಯೇ ಹೊರತು ರಾಹುಲ್ ಗಾಂಧಿ ಹೇಳಿದಂತೆ ರೂ.30 ಸಾವಿರ ಕೋಟಿಯಲ್ಲ ಎಂದಿದ್ದಾರೆ.
source; Zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.