ನವದೆಹಲಿ: ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಸರಳಗೊಳಿಸಿದ ಬಳಿಕ ಅತ್ಯಧಿಕ ಸಂಖ್ಯೆಯ ನಾಮನಿರ್ದೇಶನಗಳನ್ನು ಮಾಡಲಾಗುತ್ತಿದೆ. 2019ರ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಈಗಾಗಲೇ 49,992 ನಾಮನಿರ್ದೇಶನಗಳನ್ನು ಸರ್ಕಾರ ಸ್ವೀಕರಿಸಿದೆ.
2016ರಲ್ಲಿ 18,768 ನಾಮನಿರ್ದೇಶನಗಳು ಬಂದಿದ್ದವು, 2017ರಲ್ಲಿ 35,595 ನಾಮನಿರ್ದೇಶನ ಬಂದಿದ್ದು, ಈ ಬಾರಿ ದಾಖಲೆ ಎಂಬಂತೆ 49,992 ನಾಮನಿರ್ದೇಶನಗಳು ಬಂದಿವೆ.
ಆನ್ಲೈನ್ ಮೂಲಕ ಜನರು ತಮಗೆ ತಿಳಿದ ಸಾಧಕರ ಹೆಸರನ್ನು ಅಥವಾ ಸ್ಮತಃ ಸಾಧಕರೇ ತಮ್ಮ ಹೆಸರನ್ನು ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಳಿಸಬಹುದಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಗೃಹ ಸಚಿವಾಲಯ, ’ನಿಜವಾದ ಅರ್ಥದಲ್ಲಿ ಸರ್ಕಾರ ಪದ್ಮ ಪ್ರಶಸ್ತಿಗಳನ್ನು ಜನರ ಪ್ರಶಸ್ತಿಗಳಾಗಿ ಪರಿವರ್ತಿಸಿದೆ. ಎಳೆಮರೆಕಾಯಿಯಂತಿದ್ದ ಹೀರೋಗಳನ್ನು ಉತ್ತೇಜಿಸಲು ಇದೊಂದು ಉತ್ತಮ ಕಾರ್ಯವಾಗಿದೆ’ ಎಂದಿದೆ.
source; INDIANEXPRESS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.