ನವದೆಹಲಿ: ತನ್ನನ್ನು ಅಗಲಿದ ಪತ್ನಿಯ ಸವಿನೆನಪಿಗಾಗಿ ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿಯೊಬ್ಬರು, ಆಕೆ 21 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಶಾಲೆಗೆ ರೂ.17 ಲಕ್ಷಗಳನ್ನು ದಾನ ನೀಡಿದ್ದಾರೆ.
ವಾಯುಸೇನೆಯ ನಿವೃತ್ತ ಅಧಿಕಾರಿ, ವಿಂಗ್ ಕಮಾಂಡರ್ ಜೆಪಿ ಬದುನಿ ಅವರು ತಮ್ಮ ಪತ್ನಿ ವಿಧು ಬದುನಿಯವರ ಸ್ಮರಣಾರ್ಥ ಈ ದಾನ ಮಾಡಿದ್ದಾರೆ.
ವಿಧು ಅವರು 1986ರಿಂದ 21 ವರ್ಷಗಳ ಕಾಲ ಏರ್ಫೋರ್ಸ್ ಗೋಲ್ಡನ್ ಜುಬಿಲಿ ಇನ್ಸ್ಟಿಟ್ಯೂಟ್ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿಧು ನೆನಪಲ್ಲಿ ಜೆಪಿ ಬದುನಿ ಅವರು ನೀಡಿದ 17 ಲಕ್ಷ ರೂಪಾಯಿಗಳ ಪೈಕಿ, 10 ಲಕ್ಷ ರೂಪಾಯಿ 5-10ನೇ ತರಗತಿವಿದ್ಯಾರ್ಥಿಗಳ ಸ್ಕಾಲರ್ಶಿಪ್ ಮತ್ತು ಪ್ರಶಸ್ತಿ ಮೊತ್ತಕ್ಕೆ ವಿನಿಯೋಗವಾಗಲಿದೆ. ಉಳಿದ 7 ಲಕ್ಷ ರೂಪಾಯಿ ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗವಾಗಲಿದೆ ಎಂದು ಶಾಲಾ ಪ್ರಾಂಶುಪಾಲರು ಹೇಳಿದ್ದಾರೆ.
source; ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.