ನವದೆಹಲಿ: ಪ್ಯಾಕೇಜ್ ಆದ ಉತ್ಪನ್ನಗಳ ಮೇಲೆ ಹಿಂದಿ ಅಥವಾ ಇನ್ನಿತರ ಪ್ರಾದೇಶಿಕ ಭಾಷೆಗಳಲ್ಲಿ ಲೇಬಲ್ ಅಂಟಿಸುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಎಫ್ಎಂಸಿಜಿ ಇಂಡಸ್ಟ್ರೀಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಗ್ರಾಹಕರ ಹಿತದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಲೇಬಲಿಂಗ್ ಮಾಡಿ ಎಂದು ಕಂಪನಿಗಳಿಗೆ ಅವರು ಸಲಹೆ ನೀಡಿದ್ದಾರೆ.
ನಮ್ಮ ದೇಶದಲ್ಲಿ ಹಲವು ಭಾಷೆಗಳನ್ನು ಮಾತನಾಡಲಾಗುತ್ತಿದೆ, ಈ ಹಿನ್ನಲೆಯಲ್ಲಿ ಇಂಡಸ್ಟ್ರೀಗಳು ಹಿಂದಿ ಸೇರಿದಂತೆ ಹೆಚ್ಚಾಗಿ ಮಾತನಾಡಲಾಗುವ ಸ್ಥಳಿಯ ಭಾಷೆಗಳಲ್ಲಿ ಲೇಬಲಿಂಗ್ ಮಾಡಬೇಕು ಎಂದಿದ್ದಾರೆ.
ಗ್ರಾಹಕರ ಹಿತರಕ್ಷಣೆ ಸರ್ಕಾರದ ಆದ್ಯತೆ ಎಂದು ಪುನರುಚ್ಚರಿಸಿರುವ ಅವರು, ಗ್ರಾಹಕರ ಹಿತಕ್ಕಾಗಿ ತನ್ನ ಸಚಿವಾಲಯದ ಜೊತೆಗೂಡಿ ಕಾರ್ಯನಿರ್ವಹಿಸುವಂತೆ ಕಂಪನಿಗಳಿಗೆ ಮನವಿ ಮಾಡಿದ್ದಾರೆ.
ಚೀನಾ, ಜಪಾನ್, ಇಯುನಂತಹ ದೇಶಗಳಲ್ಲಿ ಅವರದ್ದೇ ಭಾಷೆಗಳಲ್ಲಿ ಉತ್ಪನ್ನಗಳ ಪ್ಯಾಕೇಟ್ ಮೇಲೆ ಲೇಬಲ್ ಇರುತ್ತದೆ. ಆದರೆ ನಮ್ಮ ದೇಶದಲ್ಲಿ ಮಾತ್ರ, ನಮಗೆ ಸ್ವಂತ ಭಾಷೆಯೇ ಇಲ್ಲ ಎಂಬಂತೆ ಇಂಗ್ಲೀಷ್ನಲ್ಲಿ ಲೇಬಲ್ ಹಾಕಲಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
source; Indiatoday
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.