ದೇಶದ ಬಹಳಷ್ಟು ಜನ ಉದ್ಯಮಿಗಳು ವಿವಿಧ ಬ್ಯಾಂಕ್ಗಳಿಂದ ಲಕ್ಷಾಂತರ ಕೋಟಿ ರೂಪಾಯಿಗಳ ಸಾಲವನ್ನು ಮಾಡಿ ನಂತರ ಉದ್ಯಮವನ್ನು ದಿವಾಳಿ ಎಂದು ಘೋಷಿಸಿ ಬ್ಯಾಂಕ್ಗಳಿಗೆ ಸಾಲವಂಚನೆಯನ್ನು ಮಾಡುತ್ತಿದ್ದರು.
ಹಳೆಯ ದಿವಾಳಿ ಕಾನೂನಿನಲ್ಲಿ ದಿವಾಳಿ ಎಂದು ಘೋಷಿಸಲ್ಪಟ್ಟ ಕಂಪೆನಿಗಳಿಂದ ಸಾಲ ಮರುಪಾವತಿ ಮಾಡಿಸಿಕೊಳ್ಳಲು ಅವಕಾಶವಿರಲಿಲ್ಲ. ಈ ಕಾನೂನಿನ ಲೋಪವನ್ನು ದುರುಪಯೋಗಿಸಿದ ಉದ್ಯಮಿಗಳು ಬ್ಯಾಂಕುಗಳ ಲೋನ್ ಅನ್ನು ಮರುಪಾವತಿಸದೆ ವಂಚಿಸುತ್ತಿದ್ದರು. ಮರುಪಾವತಿಯಾಗದ ಲೋನ್ಗಳನ್ನು NPA(Non Productive Assets) ಅಂತ ಘೋಷಿಸಿ ಬ್ಯಾಂಕುಗಳು ಸುಮ್ಮನಾಗುತ್ತಿದ್ದವು. ಭಾರತ ದೇಶದ ಬ್ಯಾಂಕ್ಗಳಲ್ಲಿ ಹಲವು ಲಕ್ಷ ಕೋಟಿ ರುಪಾಯಿಗಳ ಲೋನ್ಗಳು NPA ಗಳಾಗಿ ಪರಿವರ್ತನೆಗೊಂಡು ರಾಶಿಬಿದ್ದಿದ್ದವು. ಸಾರ್ವಜನಿಕರ ಹಣವು ಈ ರೀತಿಯಾಗಿ ಲೂಟಿಯಾಗುತ್ತಿತ್ತು.
ಆದರೆ ಮೋದಿ ಸರಕಾರವು ದಿವಾಳಿ ಕಾನೂನಿಗೆ (Insolvency and Bankruptcy Code ) ತಿದ್ದುಪಡಿ ತಂದು ದಿವಾಳಿ ಎಂದು ಘೋಷಿಸಲ್ಪಟ್ಟ ಉದ್ಯಮ ಹಾಗೂ ಉದ್ಯಮಿಯ ಆಸ್ತಿಯನ್ನು ಮಾರಾಟ ಮಾಡಿ ಸಾಲ ವಸೂಲಾತಿ ಮಾಡುವ ವ್ಯವಸ್ಥೆಯನ್ನು ರೂಪಿಸಿತು. ಇದರ ಪರಿಣಾಮವಾಗಿ ಹಲವು ದಶಕಗಳಿಂದ ಸಾಲ ಮರುಪಾವತಿ ಮಾಡದೇ ಇದ್ದ ಉದ್ಯಮಿಗಳು ತಮ್ಮ ಆಸ್ತಿಯು ಸಂಪೂರ್ಣವಾಗಿ ತಮ್ಮ ಕೈಬಿಟ್ಟು ಹೋಗಲಿದೆ ಎಂದು ಹೆದರಿ ಈ 2017-18 ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 1.10 ಲಕ್ಷ ಕೋಟಿಗಳಷ್ಟು ಮೊತ್ತದ ಸಾಲವನ್ನು ಬ್ಯಾಂಕ್ಗಳಿಗೆ ಮರುಪಾವತಿ ಮಾಡಿದ್ದಾರೆ. ಇದು ಮೋದಿ ಸರಕಾರದ ಅತೀ ದೊಡ್ಡ ಸಾಧನೆಯಾಗಿದೆ ಎಂದು ಹೊಗಳಲ್ಪಟ್ಟಿದೆ. ಇನ್ನೂ ಹೆಚ್ಚಿನ ಉದ್ಯಮಿಗಳು ಈ ಬದಲಾದ ಕಾನೂನಿನಡಿ ಸಾಲ ಮರುಪಾವತಿ ಮಾಡಬೇಕಿದೆ. ಇಲ್ಲವಾದರೆ ಅವರ ಆಸ್ತಿಯು ಸರಕಾರದ ವಶವಾಗಿ ಮಾರಾಟವಾಗಲಿದೆ.
ತಿದ್ದುಪಡಿ ಮಾಡಲಾದ ಹೊಸ Insolvency and Bankruptcy Code ನ ಪರಿಣಾಮವಾಗಿ ದಿವಾಳಿ ಎಂದು ಘೋಷಿಸಲ್ಪಟ್ಟಿದ್ದ ಭೂಷಣ್ ಸ್ಟೀಲ್ ಸಂಸ್ಥೆಯು ಇತ್ತೀಚೆಗೆ ಟಾಟಾ ಸ್ಟೀಲ್ ಕಂಪೆನಿಗೆ ಮಾರಾಟವಾಗಿ 36400 ಕೋಟಿ ರುಪಾಯಿಗಳ ಬ್ಯಾಂಕ್ ಸಾಲವು ಮರುಪಾವತಿಗೊಂಡಿವೆ. ಇದೇ ರೀತಿ ಸಾಲ ಮರು ಪಾವತಿ ಮಾಡಲು ತಕರಾರು ಮಾಡುತ್ತಿದ್ದ ಹಲವು ಕಂಪೆನಿಗಳು ಸಾಲ ಮರುಪಾವತಿ ಮಾಡಲು ಮುಂದಾಗಿವೆ. ಇದೇ ರೀತಿ ದಿವಾಳಿ ಎಂದು ಘೋಷಿಸಲ್ಪಟ್ಟ ಉದ್ಯಮಗಳಿಂದ ಈ ಆರ್ಥಿಕ ವರ್ಷದ ಒಳಗೆ ಒಂದು ಲಕ್ಷ ದ ಎಂಭತ್ತು ಸಾವಿರ ಕೋಟಿ ರುಪಾಯಿಗೂ ಮಿಗಿಲಾದ ಮೊತ್ತದ ಸಾಲವು ಮರುಪಾವತಿಯಾಗಲಿದೆ ಎಂದು ಕೇಂದ್ರ ವಿತ್ತ ಸಚಿವಾಲಯವು ವಿಶ್ವಾಸವನ್ನು ಹೊಂದಿದೆ. ಸಾಲ ಮಾಡಿ ದೇಶ ತೊರೆದು ಹೋದ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಈ ಮೂವರ ದೇಶ ಹಾಗೂ ವಿದೇಶಗಳಲ್ಲಿರುವ ಆಸ್ತಿ ಪಾಸ್ತಿಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. ಇವರ ಸಾಲದ ಮೊತ್ತಕ್ಕಿಂತಲೂ ಹೆಚ್ಚಿನ ಮೊತ್ತದ ಆಸ್ತಿಯನ್ನು ಸರಕಾರ ವಶಪಡಿಸಿಕೊಂಡಿದೆ.
Source : swarajyamag.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.