ಲಕ್ನೋ: ಅತ್ಯಧಿಕ ಸಂಖ್ಯೆಯ ಅನಕ್ಷರತೆಯನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಶಿಕ್ಷಣ ಇಲಾಖೆ ವಿನೂತನ ಕಾಯಕ್ರಮವೊಂದನ್ನು ಜಾರಿಗೊಳಿಸಿದೆ. ಇದರನ್ವಯ ಶಾಲೆಗೆ ಹೋಗುತ್ತಿರುವ ಮಕ್ಕಳು ತಮ್ಮ ಅನಕ್ಷರಸ್ಥ ಪೋಷಕರಿಗೆ ಮನೆಯಲ್ಲೇ ಅಕ್ಷರ ಕಲಿಸಿಕೊಡಲಿದ್ದಾರೆ.
ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡಬೇಕೆಂದರೆ ಮೊದಲು ಅವರು ವಿದ್ಯಾವಂತರಾಗಿರಬೇಕು. ಈ ಹಿನ್ನಲೆಯಲ್ಲಿ ಮಕ್ಕಳೇ ತಮ್ಮ ಹೆತ್ತವರಿಗೆ ಶಿಕ್ಷಣ ನೀಡುವ ವಿನೂತನ ಕಾರ್ಯಕ್ರಮವನ್ನು ಅಲ್ಲಿ ಹಮ್ಮಿಕೊಳ್ಳಲಾಗಿದೆ.
ಅದರಲ್ಲೂ ಹೆಚ್ಚಿನ ಪ್ರಮಾಣದ ಮಹಿಳೆಯರು ಅನಕ್ಷರಸ್ಥರಾಗಿದ್ದು, ಮನೆಯಲ್ಲೇ ಇರುವ ಇವರಿಗೆ ತಮ್ಮ ಮಕ್ಕಳಿಂದ ಅಕ್ಷರಾಭ್ಯಾಸ ಮಾಡುವ ಅವಕಾಶ ದೊರೆತಿದೆ.
6ರಿಂದ 8ನೇ ತರಗತಿ ಕಲಿಯುತ್ತಿರುವ ಮಕ್ಕಳು ತಮ್ಮ ಕುಟುಂಬದ ಕನಿಷ್ಠ ಒಬ್ಬ ಅನಕ್ಷರಸ್ಥ ಸದಸ್ಯರಿಗಾದರೂ ಅಕ್ಷರ ಜ್ಞಾನವನ್ನು ಕಲಿಸಿಕೊಡುವಂತೆ ನೋಡಿಕೊಳ್ಳಬೇಕು ಎಂದು ಶಾಲೆಗಳಿಗೆ ಇಲಾಖೆ ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.