ಉಡುಪಿ: ಮುದರಂಗಡಿ ಗ್ರಾಮಸ್ಥರು ಕುಡಿಯುವ ನೀರು ಆಗ್ರಹಿಸಿ ಪ್ರತಿಭಟನೆ ಮಾಡಲು ಆಗಮಿಸಿದಾಗ ಗ್ರಾಮ ಸಭೆಯನ್ನೇ ರದ್ದುಗೊಳಿಸಿದ ಘಟನೆ ಮುದರಂಗಡಿ ಗ್ರಾಮ ಪಂಚಾಯತ್ನಲ್ಲಿ ಶನಿವಾರ ನಡೆದಿದೆ.
ಶನಿವಾರ ಮುದರಂಗಡಿ ಚರ್ಚ್ ಸಭಾ ಭವನದಲ್ಲಿ ದ್ವಿತೀಯ ಗ್ರಾಮ ಸಭೆ ನಿಗದಿಯಾಗಿತ್ತು. ಇನ್ನೇನು ಗ್ರಾಮಸಭೆ ಆರಂಬವಾಗುತ್ತದೆ ಎನ್ನುವಾಗ ಸಾಂತೂರು ಪಿಲಾರಿನ, ವಿದ್ಯಾನಗರ ಹಾಗೂ ಮೈಕೋಡಿಯಾ ಗ್ರಾಮಸ್ಥರು ಸಮರ್ಪಕ ನೀರು ಪೂರೈಸುವಂತೆ ಆಗ್ರಹಿಸಿ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆಗೆ ಮುಂದಾದಗ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಗ್ರಾಮ ಸಭೆಯನ್ನು ರದ್ದುಗೊಳಿಸಿದ್ದು, ಕೋರಂ ಅಭಾವದಿಂದ ಗ್ರಾಮಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಸಬೂಬು ನೀಡಿ ಕೈ ತೊಳೆದುಕೊಂಡಿದೆ.
ಸ್ಥಳದಲ್ಲಿದ್ದ ಪ್ರತಿಭಟನಕಾರರೊಂದಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಡೇವಿಡ್ ಡಿಸೋಜಾ ಮಾತುಕತೆ ನಡೆಸಿದ್ದು, ಪ್ರತಿಭಟನಾಕಾರರಿಗೆ ಸಾಂತ್ವನ ನೀಡಿ ಒಂದೆರಡು ದಿನಗಳಲ್ಲಿ ನೀರಿನ ಸಮಸ್ಯೆಗೆ ಮಾತುಕತೆ ನಡೆಸಿದ್ದು, ಪ್ರತಿಭಟನಾಕಾರರಿಗೆ ಸಾಂತ್ವನ ನೀಡಿ ಒಂದೆರಡು ದಿನಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕೊಡುವುದಾಗಿ ಮನವರಿಕೆ ಮಾಡಿದರು.
ಈ ಸಂದರ್ಭ ನೊಡಲ್ ಅಧಿಕಾರಿಯಾಗಿ ಭಾಗವಹಿಸಿದ ವಿದ್ಯಾ ಇಲಾಖಾಧಿಕಾರಿ ಶಂಕರ್ ಸುವರ್ಣ ಮಾತನಾಡಿ, ಕೋರಂ ಅಭಾವದಿಂದ ಗ್ರಾಮ ಸಭೆಯನ್ನು ಮುಂದೂಡಲು ಕಾರ್ಯದರ್ಶಿ ಅನಿಲ್ ಕುಮಾರ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ನಿರ್ಣಯ ಮಾಡಿದ ಹಿನ್ನಲೆಯಲ್ಲಿ ಗ್ರಾಮಸಭೆಯನ್ನು ಮುಂದೂಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಅರುಣ್ ಶೆಟ್ಟಿ ಪಾದೂರು ಮಾತನಾಡಿ, ಜಿಲ್ಲಾ ಪಂಚಾಯತ್ನಿಂದ ಅದಷ್ಟು ಶೀಘ್ರವಾಗಿ ವಿದ್ಯಾನಗರ ೫ ಸೆಂಟ್ಸ್ ಕಾಲನಿಗೆ ಕುಡಿಯುವ ನೀರು ಪೂರೈಕೆ ಶೀಘ್ರದಲ್ಲಿಯೇ ಮಾಡುತ್ತೇವೆ. ನೀರಿಗೆ ಸಮಸ್ಯೆ ಅತೀ ಹೆಚ್ಚು ಕಂಡು ಬಂದಲ್ಲಿ ಟ್ಯಾಂಕರ್ ನೀರನ್ನು ಪೂರೈಸುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.
ಈ ಸಂದರ್ಭ ಪಿಡಿಒ ಅನಿಲ್ಕುಮಾರ್ ಮಾತನಾಡಿ, ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯ ವಿದ್ಯಾನಗರ ಜನತಾ ಕಾಲೋನಿಯಲ್ಲಿ ಲಭ್ಯವಿರುವ ಒಂದು ಕೊಳವೆ ಬಾವಿಯಲ್ಲಿ ಕುಡಿಯುವ ನೀರಿನ ಪ್ರಮಾಣವು ತೀರಾ ಕಡಿಮೆಯಾಗಿದೆ. ಕುಡಿಯುವ ನೀರು ಪೂರೈಸಲು ಅಸಾಧ್ಯವಾಗಿರುವುದರಿಂದ ಟಾಸ್ಕ್ ಫೋರ್ಸ್ ನಿಧಿಯಿಂದ ಅಥವಾ ಇತರ ಯಾವುದೇ ತುರ್ತು ನಿಧಿಯಿಂದ ಒಂದು ಕೊಳವೆ ಬಾವಿ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಲು ಕ್ರಮವಹಿಸಬೇಕೆಂದು ನಾವು ಉಡುಪಿ ತಹಶೀಲ್ದಾರರಿಗೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಅಧಿಕಾರಿಯವರಿಗೆ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಮಾಡಿದ್ದೇವೆ. ಇಲ್ಲಿಯ ಸಮಸ್ಯೆಗೆ ಶಿಘ್ರದಲ್ಲಿಯೇ ಪರಿಹಾರ ಸಿಗಲಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.