ಹೈದರಾಬಾದ್: ಅನಾರೋಗ್ಯಕ್ಕೆಂದು ಬಳಸಲಾಗುವ ಕೆಲವು ಔಷಧಿಗಳನ್ನು ಮಾದಕ ದ್ರವ್ಯವಾಗಿ ಬಳಕೆ ಮಾಡಲಾಗುತ್ತಿದೆ, ಔಷಧ ತಯಾರಕ ಕಂಪನಿಗಳು ಈ ಔಷಧಿಯೊಳಗೆ ಮತ್ತು ಬರುವ ಅಂಶಗಳನ್ನು ಯಥೇಚ್ಛವಾಗಿ ಬಳಸಿ ಆ ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಔಷಧಿಗೆ ಹೆಚ್ಚಿನ ಬೇಡಿಕೆ ಬರುವಂತೆ ಮಾಡುತ್ತಿರುವ ಬಗ್ಗೆ ಅನುಮಾನಗಳೂ ದಟ್ಟವಾಗುತ್ತಿವೆ.
ತೆಲಂಗಾಣದಲ್ಲಿ ಭಾರೀ ಸುದ್ದಿ ಮಾಡಿದ ಕೆಮ್ಮಿನ ಔಷಧಿ ‘Phensedyl’ ಯೇ ಇದಕ್ಕೆ ಉತ್ತಮ ಉದಾಹರಣೆ, ತೆಲಂಗಾಣದ ಬಹುತೇಕ ಎಲ್ಲಾ ಮೆಡಿಕಲ್ಗಳಲ್ಲಿ ಈ ಔಷಧಿಯು ಚಾಕೋಲೆಟ್ನಂತೆ ಮಾರಾಟವಾಗುತ್ತಿತ್ತು, ಎಷ್ಟರ ಮಟ್ಟಿಗೆ ಎಂದರೆ ಕೊನೆ ಕೊನೆಗೆ ಕೆಲ ಮೆಡಿಕಲ್ ಶಾಪ್ಗಳು ’ನೋ ಸ್ಟಾಕ್’ ಎಂಬ ಬೋರ್ಡ್ ಹಾಕುವ ಮಟ್ಟಿಗೆ ಇದರ ಬೇಡಿಕೆ ಹೆಚ್ಚಾಯಿತು.
ವಾತಾವರಣ, ಜನರ ಆರೋಗ್ಯ ಸಾಮಾನ್ಯ ರೀತಿಯಲ್ಲಿಯೇ ಇದೆ, ಆದರೂ ಈ ಔಷಧಿಯ ಬೇಡಿಕೆ ಇಷ್ಟೊಂದು ಹೆಚ್ಚಾಗಲು ಕಾರಣವೇನು ಎಂದು ಸ್ವತಃ ಅಲ್ಲಿನ ಸರ್ಕಾರವೇ ತಲೆ ಕೆಡಿಸಿಕೊಂಡಿತ್ತು. ಆರು ತಿಂಗಳ ಹಿಂದೆ ಸುಮಾರು 57.6 ಕೋಟಿ ಮೌಲ್ಯದ ಈ ಔಷಧ ಬಾಂಗ್ಲಾದೇಶಕ್ಕೆ ಸಾಗಾಣೆಯಾಗುತ್ತಿದ್ದ ಸಂದರ್ಭ ಡ್ರಗ್ ಕಂಟ್ರೋಲ್ ಅಡ್ಮಿನಿಸ್ಟ್ರೇಶನ್ ಅವರು ಇದನ್ನು ಪರಿಶೀಲನೆಗೂ ಒಳಪಡಿಸಿದ್ದರು.
ಅಬೋಟ್ ಹೆಲ್ತ್ ಕೇರ್ ಕಂಪನಿ ತಯಾರು ಮಾಡುತ್ತಿರುವ ‘Phensedyl’ ಔಷಧದಲ್ಲಿ ಅಮಲು ಪದಾರ್ಥವನ್ನು ಬಳಸಲಾಗುತ್ತಿತ್ತು, ಇದನ್ನು ಒಮ್ಮೆ ಸೇವಿಸಿ ಕಿಕ್ ಪಡೆದ ಜನ ಮತ್ತೆ ಮತ್ತೆ ಖರೀದಿಸಿ ಸೇವನೆ ಮಾಡುತ್ತಿದ್ದರು. ಮಾದಕ ದ್ರವ್ಯ ವ್ಯಸನಿಗಳೂ ಕಡಿಮೆ ಬೆಲೆ ಸಿಗುವ ಈ ಔಷಧವನ್ನು ತಮ್ಮ ಚಟಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು ಎಂಬುದು ಬಳಿಕ ನಡೆದ ತನಿಖೆಯಲ್ಲಿ ತಿಳಿದು ಬಂದಿದೆ.
ಸಿಐಡಿ ಪೊಲೀಸರು ಈ ಬಗ್ಗೆ ಅಬೋಟ್ ಕಂಪನಿಯ ವಿರುದ್ಧ ಪ್ರಕರಣವನ್ನೂ ದಾಖಲು ಮಾಡಿದ್ದಾರೆ, ಈ ಔಷಧಿ ಮಾರಾಟಕ್ಕೆ ನಿರ್ಬಂಧವನ್ನೂ ಹೇರಲಾಗಿದೆ.
ಒಟ್ಟಿನಲ್ಲಿ ಔಷಧದ ಹೆಸರಲ್ಲಿ ಕೆಲ ಕಂಪನಿಗಳು ನಮಗೆ ತಿಳಿಯದಂತೆ ಡ್ರಗ್ಸ್ ದಂಧೆಯನ್ನೂ ಮಾಡುತ್ತಿವೆ, ಈ ಬಗ್ಗೆ ಜನರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.