ನವದೆಹಲಿ: ದೇಶದ ರಕ್ಷಣಾ ಸಚಿವನಾಗಿ ಪ್ರಧಾನಿ ನರೇಂದ್ರ ಮೋದಿಯಿಂದ ಆಯ್ಕೆಯಾದ ಮನೋಹರ್ ಪರಿಕ್ಕರ್ ಅಧಿಕಾರ ಸ್ವೀಕರಿಸಿದ ಒಂದು ವರ್ಷಕ್ಕೂ ಮೊದಲೇ ತಮ್ಮ ದಿಟ್ಟತನವನ್ನು ಸಾಬೀತುಪಡಿಸಿದ್ದಾರೆ.
ತಮ್ಮ ಕಾರ್ಯಚಟುವಟಿಕೆಗಳ ಮೂಲಕ ಮೋದಿ ಕ್ಯಾಬಿನೆಟ್ನ ಒಬ್ಬ ಸಮರ್ಥ ಸಚಿವ ಎನಿಸಿಕೊಂಡಿದ್ದಾರೆ. ಮೋದಿಯಂತೆಯೇ ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಒಬ್ಬ ಕ್ಲೀನ್ ಇಮೇಜ್ನ, ಅಪ್ರತಿಮ ದೇಶಭಕ್ತ ನಾಯಕನಾಗಿ ಸೇನೆಗೆ ಸ್ಫೂರ್ತಿ ತುಂಬುತ್ತಿದ್ದಾರೆ.
ಸದಾ ಭಾರತದ ವಿರುದ್ಧ ಕಾಲ್ಕೆರೆದು ಜಗಳಕ್ಕೆ ಬರುವ ಪಾಕಿಸ್ಥಾನಕ್ಕೆ ಕಟು ಮಾತುಗಳಿಂದಲೇ ಸ್ಪಷ್ಟ ಸಂದೇಶ ರವಾನಿಸುವುದರಿಂದ ಹಿಡಿದು ಮಯನ್ಮಾರ್ ಗಡಿಯೊಳಗೆ ಸೇನೆಯನ್ನು ನುಗ್ಗಿಸಿ ಉಗ್ರರನ್ನು ಅಟ್ಟಾಡಿಸುವವರೆಗೆ ಪರಿಕ್ಕರ್ ತೋರಿದ ದಿಟ್ಟತನ ಶ್ಲಾಘನೀಯ.
ಯಾವ ನೆರೆಯ ರಾಷ್ಟ್ರವೂ ನಮ್ಮನ್ನು ಹಗುರವಾಗಿ ಪರಿಗಣಿಸಲು ನಾವು ಬಿಡಲ್ಲ, ನನ್ನ ದೇಶಕ್ಕಾಗಿ ನಾನು ಯಾವ ಮಟ್ಟಕ್ಕೆ ಇಳಿಯಲೂ ಚಿಂತಿಸುವುದಿಲ್ಲ, ಭಯೋತ್ಪಾದನೆಯನ್ನು ಭಯೋತ್ಪಾದನೆಯಿಂದಲೇ ತೊಡೆದು ಹಾಕಲು ನಾವು ಹಿಂಜರಿಯುವುದಿಲ್ಲ, ಗಡಿ ದಾಟಿ ಬರುವ ಭಯೋತ್ಪಾದಕರು ಮಾನವ ಹಕ್ಕನ್ನು ನಿರೀಕ್ಷಿಸಬಾರದು, ನಮ್ಮ 13 ಲಕ್ಷ ಸೈನಿಕರು ಶಾಂತಿಯನ್ನು ಪ್ರತಿಪಾದಿಸಲು ಇರುವವರಲ್ಲ ಎಂದು ಪರಿಕ್ಕರ್ ಬಹಿರಂಗವಾಗಿಯೇ ಗುಡುಗಿದ್ದಾರೆ.
ಈ ಮೂಲಕ ದೇಶದ ಭದ್ರತೆಯ ವಿಷಯವಾಗಿ ತಾನೆಂದೂ ಮೃದು ಧೋರಣೆಯನ್ನು ಅನುಸರಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
೨೫ ವರ್ಷ ಆರ್ಎಸ್ಎಸ್ನಲ್ಲಿ ಸೇವೆ ಸಲ್ಲಿಸಿ, ಗೋವಾದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಪರಿಕ್ಕರ್ ಒಬ್ಬ ಸಮರ್ಥ ನಾಯಕ ಎಂದು ಈಗಾಗಲೇ ಹೆಸರು ಪಡೆದಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವದ ಅವರು ಇಂದಿಗೂ ಸಭೆ ಸಮಾರಂಭಗಳಿಗೆ ಹಿಂಬಾಲಕರಿಲ್ಲದೆಯೇ ತೆರಳುತ್ತಾರೆ, ಸಾಮಾನ್ಯರಂತೆ ಕ್ಯೂನಲ್ಲಿ ನಿಲ್ಲುತ್ತಾರೆ.
ಪರಿಕ್ಕರ್ನಂತಹ ನಾಯಕನ ಕೈಯಲ್ಲಿ ಆಂತರಿಕವಾಗಿಯೂ, ಬಾಹ್ಯವಾಗಿಯೂ ದೇಶ ಸುಭದ್ರವಾಗಿರುತ್ತದೆ ಎಂಬ ವಿಶ್ವಾಸ ಈ ದೇಶದ ಜನರಲ್ಲಿ ಮೂಡಿದೆ, ಅದಕ್ಕೆ ಕಳೆದ ಒಂದು ವರ್ಷದಿಂದ ಅವರು ಮಾಡುತ್ತಿರುವ ಕಾರ್ಯಗಳೇ ಕಾರಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.