ಸೂರತ್: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದೇ ಹುಟ್ಟಿದ ಸುಮಾರು 1,200 ಮಂದಿ, ಸೋಮವಾರ ಸಾಮೂಹಿಕವಾಗಿ ಬರ್ತ್ ಡೇ ಆಚರಿಸಿಕೊಳ್ಳುವ ಮೂಲಕ ಗಿನ್ನಿಸ್ ವಿಶ್ವದಾಖಲೆ ಮಾಡಿದ್ದಾರೆ.
ಸೂರತ್ನ ಸರ್ಸಾನ ಎಕ್ಸಿಬಿಷನ್ ಸೆಂಟರ್ನಲ್ಲಿ ಸೇರಿದ ಸಾವಿರಾರು ಮಂದಿ, ಒಂದೇ ರೂಫ್ನಡಿ ಕೇಕ್ ಕಟ್ ಮಾಡಿಕೊಳ್ಳುವ ಮೂಲಕ ಬರ್ತ್ ಡೇ ಆಚರಿಸಿಕೊಂಡರು. ಇದು ವಿಶ್ವದ ‘ಅತೀದೊಡ್ಡ ಸಮಾನ ಹುಟ್ಟುಹಬ್ಬ ಸಮ್ಮಿಲನ’ ಎಂಬ ವಿಶ್ವದಾಖಲೆಯನ್ನು ನಿರ್ಮಾಣ ಮಾಡಿದೆ. ಈ ಹಿಂದೆ ಈ ವಿಶ್ವದಾಖಲೆ ನೆದರ್ಲ್ಯಾಂಡ್ ಬಳಿಯಿತ್ತು. ಅಲ್ಲಿ 200 ಮಂದಿ ಒಟ್ಟಿಗೆ ಬರ್ತ್ ಡೇ ಆಚರಿಸಿದ್ದರು.
ಅತುಲ್ ಬೇಕರಿ ಈ ವಿಭಿನ್ನ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು, ಸೆ.17ರಂದು ಜನಿಸಿದ ಹಲವಾರು ಮಕ್ಕಳು, ವಯಸ್ಕರು, ಯುವಕ, ಯುವತಿಯರು ಇಲ್ಲಿ ಕೇಕ್ ಕಟ್ ಮಾಡಿ, ಬರ್ತ್ ಡೇ ಸಾಂಗ್ ಹಾಡಿ ಸಂಭ್ರಮಿಸಿದರು.
ಬರ್ತ್ ಡೇ ಸಂಭ್ರಮದಲ್ಲಿದ್ದ ಜನರನ್ನು 20 ಗುಂಪುಗಳಾಗಿ ವಿಂಗಡನೆ ಮಾಡಲಾಗಿತ್ತು, ಪ್ರತಿ ಗುಂಪಲ್ಲಿ ಸುಮಾರು 50 ಮಂದಿ ಇದ್ದರು. ಈ ಗುಂಪುಗಳಿಗೆ ಮೋದಿ ಯೋಜನೆಗಳ ಹೆಸರಿಟ್ಟಿದ್ದು ಇನ್ನೊಂದು ವಿಶೇಷ.
ತರುಣಿಯರ ಗುಂಪಿಗೆ ‘ಸುಕನ್ಯ ಯೋಜನಾ’ ಎಂದು ಹೆಸರಿಸಲಾಗಿತ್ತು, ಪುಟಾಣಿ ಹೆಣ್ಣು ಮಕ್ಕಳ ಗುಂಪಿಗೆ ‘ಬೇಟಿ ಪಡಾವೋ, ಬೇಟಿ ಬಚಾವೋ’ ಎಂದು ಹೆಸರಿಸಲಾಗಿತ್ತು, ವಯಸ್ಸಾದವರ ಗುಂಪಿಗೆ ‘ಅಟಲ್ ಪೆನ್ಶನ್ ಯೋಜನಾ’ ಎಂದು ಹೆಸರಿಸಲಾಗಿತ್ತು, ಯುವಕರ ತಂಡಕ್ಕೆ ‘ಸ್ಕಿಲ್ ಇಂಡಿಯಾ’, ’ಡಿಜಿಟಲ್ ಇಂಡಿಯಾ’ ಮುಂತಾದ ಹೆಸರುಗಳನ್ನು ಇಡಲಾಗಿತ್ತು.
ಕಳೆದ ವರ್ಷ ಸೆ.17ರಂದು ಮೋದಿ ಹುಟ್ಟು ಹಬ್ಬದ ಅಂಗವಾಗಿ 680 ಅಡಿ ಎತ್ತರದ ಕೇಕ್ನ್ನು ಈ ಬೇಕರಿ ದಿವ್ಯಾಂಗರಿಂದ ಕಟ್ ಮಾಡಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.