ಜಮ್ಮು: ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಭಾರತ-ಪಾಕಿಸ್ಥಾನ ಗಡಿ ಪ್ರದೇಶದಲ್ಲಿ ಸಮಗ್ರ ಏಕೀಕೃತ ಗಡಿ ನಿರ್ವಹಣಾ ವ್ಯವಸ್ಥೆಗೆ ಚಾಲನೆಯನ್ನು ನೀಡಿದರು.
ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಂದು ಕೇವಲ ಗೃಹ ಸಚಿವಾಲಯ ಅಲ್ಲ, ಇಡೀ ದೇಶಕ್ಕೆ ಐತಿಹಾಸಿಕ ದಿನ. ಬಿಎಸ್ಎಫ್ನಿಂದ ರಕ್ಷಿಸಲ್ಪಡುವ ಗಡಿಯ ಭದ್ರತೆ ಇನ್ನಷ್ಟು ಹೆಚ್ಚಳವಾಗಿದೆ, ಸಮಗ್ರ ಏಕೀಕೃತ ಗಡಿ ನಿರ್ವಹಣಾ ವ್ಯವಸ್ಥೆಯನ್ನು ನಾವಿಂದು ಅಳವಡಿಸಿದ್ದೇವೆ. ಇದು ನಮ್ಮ ಗಡಿಯನ್ನು ಹೆಚ್ಚು ಸುರಕ್ಷಿತಗೊಳಿಸಲಿದೆ’ ಎಂದರು.
‘ಇಂದು ನಮ್ಮ ಪ್ರಧಾನಿಗಳ ಜನಮದಿನ. ಸಮಗ್ರ ಏಕೀಕೃತ ಗಡಿ ನಿರ್ವಹಣಾ ವ್ಯವಸ್ಥೆಯನ್ನು ನಾನು ಸಮಸ್ತ ಯೋಧರಿಗೆ ಸಮರ್ಪಣೆ ಮಾಡುತ್ತೇನೆ’ ಎಂದರು.
ಈ ಯೋಜನೆಯಡಿ ಗಡಿಯುದ್ದಕ್ಕೂ ’ಸ್ಮಾರ್ಟ್ ಬೇಲಿ’ಗಳನ್ನು ಅಳವಡಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.